iBet uBet web content aggregator. Adding the entire web to your favor.
iBet uBet web content aggregator. Adding the entire web to your favor.



Link to original content: https://kn.wikipedia.org/wiki/ಹೊಳ್ಳೆ
ಹೊಳ್ಳೆ - ವಿಕಿಪೀಡಿಯ ವಿಷಯಕ್ಕೆ ಹೋಗು

ಹೊಳ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಳ್ಳೆಯು ಮೂಗಿನ ಎರಡು ರಂಧ್ರಗಳಲ್ಲಿ ಒಂದು. ಇವು ಒಂದು ಬಿಂದುವಿನಿಂದ ಕವಲೊಡೆದು ಬಾಹ್ಯ ರಂಧ್ರವಾಗಿ ತೆರೆದುಕೊಳ್ಳುತ್ತವೆ. ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ, ಇವು ಸುರುಳಿ ಮೂಳೆಗಳು ಎಂದು ಕರೆಯಲ್ಪಡುವ ಕವಲೊಡೆದ ಮೂಳೆಗಳು ಅಥವಾ ಮೃದ್ವಸ್ಥಿಗಳನ್ನು ಹೊಂದಿರುತ್ತವೆ. ಉಚ್ಛ್ವಾಸಗೊಂಡ ಗಾಳಿಯನ್ನು ಬಿಸಿಮಾಡುವುದು ಮತ್ತು ನಿಶ್ವಾಸದಲ್ಲಿ ತೇವವನ್ನು ತೆಗೆಯುವುದು ಇವುಗಳ ಕಾರ್ಯವಾಗಿದೆ. ಮೀನುಗಳು ತಮ್ಮ ಮೂಗುಗಳ ಮೂಲಕ ಉಸಿರಾಡುವುದಿಲ್ಲ, ಆದರೆ ಆಘ್ರಾಣಕ್ಕಾಗಿ ಬಳಸಲ್ಪಡುವ ಎರಡು ಚಿಕ್ಕ ರಂಧ್ರಗಳನ್ನು ಹೊಂದಿರುತ್ತವೆ. ಇವನ್ನು ವಾಸ್ತವವಾಗಿ ಹೊಳ್ಳೆಗಳು ಎಂದು ಕರೆಯಬಹುದು.

ಮಾನವರಲ್ಲಿ, ನಾಸಿಕ ಚಕ್ರವು ಪ್ರತಿಯೊಂದು ಹೊಳ್ಳೆಯ ರಕ್ತನಾಳಗಳು ಊದಿಕೊಳ್ಳುವ, ನಂತರ ಕುಗ್ಗುವ ಅವಧಿಯಲ್ಲಿ ರಕ್ತ ಸಂಗ್ರಹವಾಗುವ ಸಾಮಾನ್ಯ ಅಲ್ಟ್ರಾಡಿಯಾನ್ ಚಕ್ರವಾಗಿದೆ.

ವಿಭಾಜಕ ಭಿತ್ತಿಯು ಹೊಳ್ಳೆಗಳನ್ನು ಪ್ರತ್ಯೇಕಿಸುತ್ತದೆ. ಕೆಲವೊಮ್ಮೆ ವಿಭಾಜಕ ಭಿತ್ತಿಯು ಸೊಟ್ಟಗಿರಬಹುದು. ಇದರಿಂದ ಒಂದು ಹೊಳ್ಳೆಯು ಮತ್ತೊಂದಕ್ಕಿಂತ ದೊಡ್ಡದಾಗಿ ಕಾಣಿಸುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಹೊಳ್ಳೆ&oldid=905281" ಇಂದ ಪಡೆಯಲ್ಪಟ್ಟಿದೆ