iBet uBet web content aggregator. Adding the entire web to your favor.
iBet uBet web content aggregator. Adding the entire web to your favor.



Link to original content: https://kn.wikipedia.org/wiki/ವರ್ಣಕೋಶ(ಕ್ರೋಮಟೊಫೋರ್)
ವರ್ಣಕೋಶ(ಕ್ರೋಮಟೊಫೋರ್) - ವಿಕಿಪೀಡಿಯ ವಿಷಯಕ್ಕೆ ಹೋಗು

ವರ್ಣಕೋಶ(ಕ್ರೋಮಟೊಫೋರ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕತ್ತಲು (ಮೇಲಿನದು) ಮತ್ತು ಬೆಳಕಿನಲ್ಲಿ (ಕೆಳಗೆ) ಜೀಬ್ರಾಫಿಶ್ ವರ್ಣಕೋಶಗಳು.

ವರ್ಣಕೋಶಗಳು ಉಭಯಚರಗಳು, ಮೀನುಗಳು, ಸರೀಸೃಪಗಳು, ವಲ್ಕವಂತಪ್ರಾಣಿಗಳು ಮತ್ತು ಶೀರ್ಷಪಾದಿಗಳಲ್ಲಿ ಕಂಡುಬರುವ ವರ್ಣದ್ರವ್ಯವನ್ನು ಹೊಂದಿರುವ ಮತ್ತು ಬೆಳಕನ್ನು-ಪ್ರತಿಫಲಿಸುವ ಜೀವಕೋಶಗಳಾಗಿವೆ. ಅವು ಶೀತ-ರಕ್ತದ ಪ್ರಾಣಿಗಳಲ್ಲಿ ಚರ್ಮ ಮತ್ತು ಕಣ್ಣಿನ ಬಣ್ಣವನ್ನು ಉಂಟುಮಾಡಲು ಕಾರಣವಾಗಿರುತ್ತವೆ ಹಾಗೂ ಅವು ಭ್ರೂಣದ ಬೆಳವಣಿಗೆಯ ಸಂದರ್ಭದಲ್ಲಿ ನರದ ತುದಿಯಲ್ಲಿ ಹುಟ್ಟುತ್ತವೆ. ಬಲಿತ ವರ್ಣಕೋಶಗಳನ್ನು ಬಿಳಿ ಬೆಳಕಿನಡಿಯಲ್ಲಿ ಅವುಗಳ ಬಣ್ಣದ (ಹೆಚ್ಚು ಕರಾರುವಾಕ್ಕಾಗಿ "ವರ್ಣ(ಹ್ಯೂ)") ಆಧಾರದಲ್ಲಿ ಉಪವರ್ಗಗಳಾಗಿ ವಿಂಗಡಿಸಲಾಗುತ್ತದೆ: ಕ್ಸಾಂತೊಫೋರ್‌ಗಳು (ಹಳದಿ), ಎರಿತ್ರೊಫೋರ್‌ಗಳು (ಕೆಂಪು), ಇರಿಡೊಫೋರ್‌ಗಳು (ಪ್ರತಿಫಲಿಸುವ / ವರ್ಣವೈವಿಧ್ಯದ), ಲ್ಯೂಕೊಫೋರ್‌ಗಳು (ಬಿಳಿ), ಮೆಲನೊಫೋರ್‌ಗಳು (ಕಪ್ಪು/ಕಂದು) ಮತ್ತು ಸೈಯನೊಫೋರ್‌ಗಳು (ನೀಲಿ). ಈ ಪದವು ಕೆಲವು ರೀತಿಯ ದ್ಯುತಿಸಂಶ್ಲೇಷಕ ಬ್ಯಾಕ್ಟೀರಿಯಾಗಳಲ್ಲಿ ಕಂಡುಬರುವ ವರ್ಣಯುಕ್ತ, ಪೊರೆಯೊಂದಿಗೆ ಜತೆಗೂಡಿದ ಕೋಶಕಗಳನ್ನೂ ಸೂಚಿಸುತ್ತದೆ.

ಕೆಲವು ಜಾತಿಗಳು ವರ್ಣಕೋಶಗಳಲ್ಲಿ ಬಣ್ಣವನ್ನು ಇನ್ನೊಂದು ಭಾಗಕ್ಕೆ ವರ್ಗಾಯಿಸುವ ಮತ್ತು ಪ್ರತಿಬಿಂಬಕ ಭಾಗಗಳನ್ನು ಬೇರೆ ದಿಕ್ಕಿಗೆ ತಿರುಗಿಸುವ ಪ್ರಕ್ರಿಯೆಗಳ ಮೂಲಕ ವೇಗವಾಗಿ ಬಣ್ಣವನ್ನು ಬದಲಾಯಿಸಿಕೊಳ್ಳಬಲ್ಲವು. ಹೆಚ್ಚಾಗಿ ಮರೆಮಾಡುವ ಪ್ರಕಾರವಾಗಿ ಬಳಸುವ ಈ ಕ್ರಿಯೆಯನ್ನು ಶರೀರ ವೈಜ್ಞಾನಿಕ ಬಣ್ಣದ ಬದಲಾವಣೆಯೆಂದು ಕರೆಯಲಾಗುತ್ತದೆ. ಅಕ್ಟೋಪಸ್‌‌ನಂತಹ ಶೀರ್ಷಪಾದಿಗಳು ಇದನ್ನು ಸಾಧಿಸಲು ಸ್ನಾಯುಗಳಿಂದ ನಿಯಂತ್ರಿಸಲ್ಪಟ್ಟ ಸಂಕೀರ್ಣ ವರ್ಣಕೋಶ ಅಂಗಗಳನ್ನು ಹೊಂದಿದೆ. ಗೋಸುಂಬೆಯಂತಹ(ಊಸರವಳ್ಳಿ) ಕಶೇರುಕಗಳು ಜೀವಕೋಶದ ಸಂಕೇತ ನೀಡುವ ಮೂಲಕ ಅಂತಹುದೇ ಪರಿಣಾಮವನ್ನು ಉಂಟುಮಾಡುತ್ತವೆ. ಅಂತಹ ಸಂಕೇತಗಳು ಹಾರ್ಮೋನುಗಳು ಅಥವಾ ನರಪ್ರೇಕ್ಷಕಗಳಾಗಿರಬಹುದು ಹಾಗೂ ಅವು ಮನೋಧರ್ಮ, ತಾಪಮಾನ ಮತ್ತು ಒತ್ತಡದ ಬದಲಾವಣೆಯಿಂದ ಅಥವಾ ಸ್ಥಳೀಯ ಪರಿಸರದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಹುಟ್ಟಿಕೊಳ್ಳಬಹುದು.

ಶೀತ-ರಕ್ತದ ಪ್ರಾಣಿಗಳಿಗೆ ಭಿನ್ನವಾಗಿ, ಸಸ್ತನಿಗಳು ಮತ್ತು ಪಕ್ಷಿಗಳು ಕೇವಲ ಒಂದೇ ವರ್ಗದ ವರ್ಣಕೋಶ-ರೀತಿಯ ಜೀವಕೋಶವನ್ನು ಹೊಂದಿರುತ್ತವೆ: ಮೆಲನೊಸೈಟ್‌. ಶೀತ-ರಕ್ತದ ಪ್ರಾಣಿಗಳ ಮೆಲನೊಫೋರ್‌ಗಳನ್ನು ವಿಜ್ಞಾನಿಗಳು ಮಾನವನ ರೋಗಗಳ ಬಗ್ಗೆ ತಿಳಿಯಲು ಅಧ್ಯಯನ ಮಾಡಿದ್ದಾರೆ ಹಾಗೂ ಇವನ್ನು ಔಷಧಿ ಶೋಧನೆಯಲ್ಲಿಯೂ ಒಂದು ಪ್ರಮುಖ ಸಾಧನವಾಗಿ ಬಳಸಲಾಗುತ್ತದೆ.

ವರ್ಗೀಕರಣ

[ಬದಲಾಯಿಸಿ]

ಅಕಶೇರುಕಗಳ ಬಣ್ಣವನ್ನು ಹೊಂದಿರುವ ಜೀವಕೋಶಗಳನ್ನು ಮೊದಲು ಕ್ರೋಮೊಫೋರೊ ಎಂಬುದಾಗಿ 1819ರಲ್ಲಿ ಇಟಲಿಯ ವಿಜ್ಞಾನ ಪತ್ರಿಕೆಯು ವಿವರಿಸಿದೆ.[] ಕ್ರೋಮಟೊಫೋರ್(ವರ್ಣಕೋಶ) ಪದವನ್ನು ನಂತರ ಶೀತ-ರಕ್ತದ ಕಶೇರುಕಗಳ ಮತ್ತು ಶೀರ್ಷಪಾದಿಗಳ ನರದ ತುದಿಯಿಂದ ಪಡೆದ ಬಣ್ಣವನ್ನು ಹೊಂದಿರುವ ಜೀವಕೋಶಗಳ ಹೆಸರಿಗೆ ಆರಿಸಿಕೊಳ್ಳಲಾಯಿತು. ಈ ಪದವು ಕ್ರೋಮ (χρωμα) ಅಂದರೆ "ಬಣ್ಣ" ಮತ್ತು ಫೋರಸ್ (φορος) ಅಂದರೆ "ಹೊಂದಿರುವ" ಎಂಬ ಗ್ರೀಕ್ ಪದಗಳಿಂದ ಬಂದಿದೆ. ಇದಕ್ಕೆ ವಿರುದ್ಧವಾಗಿ, ಕ್ರೊಮಟೊಸೈಟ್ ("ಜೀವಕೋಶ"ಕ್ಕೆ ಗ್ರೀಕ್ ಪದ ಸೈಟ್ ಅಥವಾ κυτε) ಎಂಬ ಪದವನ್ನು ಪಕ್ಷಿ ಮತ್ತು ಸಸ್ತನಿಗಳಲ್ಲಿ ಕಂಡುಬರುವ ಬಣ್ಣಕ್ಕೆ ಕಾರಣವಾದ ಜೀವಕೋಶಗಳನ್ನು ಸೂಚಿಸಲು ಆರಿಸಿಕೊಳ್ಳಲಾಯಿತು. ಅಂತಹ ಕೇವಲ ಒಂದು ಜೀವಕೋಶವನ್ನು, ಮೆಲನೊಸೈಟ್‌, ಈ ಸಸ್ತನಿಗಳಲ್ಲಿ ಗುರುತಿಸಲಾಗಿದೆ.

1960ರಲ್ಲಿ ವರ್ಣಕೋಶಗಳ ರಚನೆ ಮತ್ತು ಬಣ್ಣ ಕೊಡುವುದನ್ನು ಅವುಗಳ ರೂಪದ ಆಧಾರದಲ್ಲಿ ಉಪ-ವರ್ಗೀಕರಣದ ವ್ಯವಸ್ಥೆಯ ಅಭಿವೃದ್ಧಿಗಾಗಿ ತಿಳಿಯಲಾಯಿತು. ಈ ವರ್ಗೀಕರಣ ವ್ಯವಸ್ಥೆಯು ಈಗಲೂ ಉಳಿದುಕೊಂಡಿದೆ, ಆದರೂ ಇತ್ತೀಚಿನ ಅಧ್ಯಯನಗಳು ಬಣ್ಣದ ಕೆಲವು ಜೀವರಾಸಾಯನಿಕ ಅಂಶಗಳು ಜೀವಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ತಿಳಿಯಲು ಹೆಚ್ಚು ಉಪಯುಕ್ತಕಾರಿಯಾಗಿರುತ್ತವೆಂದು ತಿಳಿಯಪಡಿಸಿವೆ.[]

ಬಣ್ಣ-ಉತ್ಪತ್ತಿಮಾಡುವ ಅಂಶಗಳಲ್ಲಿ ಎರಡು ವಿಭಿನ್ನ ವರ್ಗಗಳಿವೆ: ಬಯೋಕ್ರೋಮ್‌ಗಳು ಮತ್ತು ಸ್ಕೀಮೊಕ್ರೋಮ್‌ಗಳು.[] ಬಯೋಕ್ರೋಮ್‌ಗಳು ನಿಜವಾದ ಬಣ್ಣಗಳನ್ನು ಒಳಗೊಳ್ಳುತ್ತವೆ, ಉದಾ. ಕ್ಯಾರೊಟಿನಾಯ್ಡ್‌‌ಗಳು ಮತ್ತು ಪ್ಟೆರಿಡಿನ್‌ಗಳು. ಈ ಬಣ್ಣಗಳು ಕಣ್ಣಿಗೆ ಕಾಣುವ ಬೆಳಕಿನ ಆಯ್ದ ಭಾಗಗಳನ್ನು ಹೀರಿಕೊಳ್ಳುತ್ತವೆ. ಅವು ಇತರ ತರಂಗದೂರಗಳನ್ನು ವೀಕ್ಷಕನ ಕಣ್ಣನ್ನು ತಲುಪಲು ಅವಕಾಶ ಮಾಡಿಕೊಡುವಾಗ ಬಿಳಿ ಬೆಳಕನ್ನು ಉಂಟುಮಾಡುತ್ತವೆ. "ರಚನಾತ್ಮಕ ಬಣ್ಣ"ಗಳೆಂದೂ ಕರೆಯಲಾಗುವ ಸ್ಕೀಮೊಕ್ರೋಮ್‌‌ಗಳು ಬೆಳಕಿನ ಕೆಲವು ತರಂಗದೂರಗಳನ್ನು (ಬಣ್ಣಗಳನ್ನು) ಪ್ರತಿಫಲಿಸುವ ಮತ್ತು ಇತರ ತರಂಗದೂರಗಳನ್ನು ಸಾಗಿಸುವ ಮೂಲಕ, ಬೆಳಕಿನ ತರಂಗಗಳು ಆ ರಚನೆಯೊಳಗೆ ಮಧ್ಯೆ ಪ್ರವೇಶಿಸುವಂತೆ ಮಾಡುವ ಮೂಲಕ ಅಥವಾ ಅವುಗಳ ಮೇಲೆ ಬೀಳುವ ಬೆಳಕನ್ನು ಹರಡುವಂತೆ ಮಾಡುವ ಮೂಲಕ ಬಣ್ಣವನ್ನು ಕೊಡುತ್ತವೆ.

ಎಲ್ಲಾ ವರ್ಣಕೋಶಗಳು ಬಣ್ಣಗಳನ್ನು ಅಥವಾ ಪ್ರತಿಫಲಿಸುವ ರಚನೆಗಳನ್ನು ಹೊಂದಿರುತ್ತವೆ (ಆನುವಂಶಿಕ ಹಠಾತ್ ಬದಲಾವಣೆಯಿಂದಾಗಿ ಬರುವ ಬಿಳಿಚಿಕೆ ಎಂಬ ರೋಗದ ಸಂದರ್ಭದಲ್ಲಿ ಇದಕ್ಕೆ ಹೊರತಾಗಿರುತ್ತದೆ). ಆದರೆ ಬಣ್ಣವನ್ನು ಹೊಂದಿರುವ ಎಲ್ಲಾ ಜೀವಕೋಶಗಳು ವರ್ಣಕೋಶಗಳಲ್ಲ. ಉದಾಹರಣೆಗಾಗಿ, ಹೇಮ್ ಎಂಬುದು ರಕ್ತವು ಕೆಂಪಾಗಿ ಗೋಚರಿಸುವುದಕ್ಕೆ ಕಾರಣವಾದ ಒಂದು ಬಯೋಕ್ರೋಮ್‌. ಇದು ಭ್ರೂಣದ ಬೆಳವಣಿಗೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ಬದಲಿಗೆ ಮೂಲತಃ ಒಂದು ಜೀವಿಯ ಜೀವನದಾದ್ಯಂತ ಮೂಳೆಯ ಮಜ್ಜೆಯಲ್ಲಿ ಉತ್ಪತ್ತಿಯಾಗುವ ಕೆಂಪು ರಕ್ತಕಣಗಳಲ್ಲಿ (ಎರಿತ್ರೊಸೈಟ್‌ಗಳು) ಕಂಡುಬರುತ್ತದೆ. ಆದ್ದರಿಂದ ಎರಿತ್ರೊಸೈಟ್‌ಗಳನ್ನು ವರ್ಣಕೋಶಗಳಾಗಿ ವರ್ಗೀಕರಿಸಲಾಗಿಲ್ಲ.

ಬಣ್ಣ ಬದಲಾಯಿಸಿದ ಗೋಸುಂಬೆ, ಕ್ಯಾಮೆಲಿಯೊ ಕ್ಯಾಲಿಪ್ಟ್ರೇಟಸ್.ರಚನಾತ್ಮಕ ಹಸಿರು ಮತ್ತು ನೀಲಿ ಬಣ್ಣಗಳು ಬೆಳಕನ್ನು ಪ್ರತಿಫಲಿಸಲು ವರ್ಣಕೋಶಗಳು ಹರಡಿ ಉಂಟಾಗುತ್ತವೆ.

ಕ್ಸಾಂತೊಫೋರ್‌ಗಳು ಮತ್ತು ಎರಿತ್ರೊಫೋರ್‌ಗಳು

[ಬದಲಾಯಿಸಿ]

ಹೆಚ್ಚಿನ ಪ್ರಮಾಣದ ಹಳದಿ ಪ್ಟೆರಿಡಿನ್‌ ಬಣ್ಣಗಳನ್ನು ಹೊಂದಿರುವ ವರ್ಣಕೋಶಗಳನ್ನು ಕ್ಸಾಂತೊಫೋರ್‌ಗಳೆಂದು ಹೇಳಲಾಗುತ್ತದೆ; ಕೆಂಪು/ಕಿತ್ತಳೆ ಕ್ಯಾರೊಟಿನಾಯ್ಡ್‌ಗಳನ್ನು ಹೆಚ್ಚಾಗಿ ಹೊಂದಿರುವ ವರ್ಣಕೋಶಗಳನ್ನು ಎರಿತ್ರೊಫೋರ್‌ಗಳೆಂದು ಕರೆಯಲಾಗುತ್ತದೆ.[] ಪ್ಟೆರಿಡಿನ್‌ ಮತ್ತು ಕ್ಯಾರೊಟಿನಾಯ್ಡ್‌ ಹೊಂದಿರುವ ಕೋಶಕಗಳು ಕೆಲವೊಮ್ಮೆ ಒಂದೇ ಜೀವಕೋಶದಲ್ಲಿ ಕಂಡುಬರುತ್ತವೆ. ಈ ಉದಾಹರಣೆಯಲ್ಲಿ ಬಣ್ಣವು ಕೆಂಪು ಮತ್ತು ಹಳದಿ ಬಣ್ಣಗಳ ಅನುಪಾತವನ್ನು ಆಧರಿಸಿರುತ್ತದೆ.[] ಆದ್ದರಿಂದ ಈ ವರ್ಣಕೋಶ ಪ್ರಕಾರಗಳ ನಡುವಿನ ವ್ಯತ್ಯಾಸವು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ.

ಗ್ವಾನೊಸಿನ್ ಟ್ರೈಫಾಸ್ಫೇಟ್‌ನಿಂದ ಪ್ಟೆರಿಡಿನ್‌ಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯವು ಹೆಚ್ಚಿನ ವರ್ಣಕೋಶಗಳಲ್ಲಿ ಸಾಮಾನ್ಯವಾಗಿರುವ ಲಕ್ಷಣವಾಗಿದೆ. ಆದರೆ ಕ್ಸಾಂತೊಫೋರ್‌ಗಳು ಪೂರಕ ಜೀವರಾಸಾಯನಿಕ ಮಾರ್ಗಗಳಾಗಿ ಕಂಡುಬರುತ್ತವೆ, ಅವು ಹಳದಿ ಬಣ್ಣವನ್ನು ಹೆಚ್ಚು ಸಂಗ್ರಹಿಸುತ್ತವೆ. ಇದಕ್ಕೆ ಪ್ರತಿಯಾಗಿ, ಕ್ಯಾರೊಟಿನಾಯ್ಡ್‌ಗಳು ಆಹಾರಕ್ರಮದಿಂದ ಚಯಾಪಚಯಗೊಳ್ಳುತ್ತವೆ ಮತ್ತು ಎರಿತ್ರೊಫೋರ್‌ಗಳಿಗೆ ಸಾಗಿಸಲ್ಪಡುತ್ತವೆ. ಇದನ್ನು ಮೊದಲು ಕ್ಯಾರೊಟಿನ್-ನಿರ್ಬಂಧಿತ ಕ್ರಿಕೆಟ್(ಒಂದು ಬಗೆಯ ಮಿಡತೆ)‌ಗಳನ್ನು ಸೇವಿಸುವ ಆಹಾರ ಕ್ರಮವನ್ನು ಹೊಂದಿರುವ ಹಸಿರು ಕಪ್ಪೆಗಳಿಂದ ರುಜುವಾತುಪಡಿಸಲಾಯಿತು. ಕಪ್ಪೆಗಳ ಆಹಾರದಲ್ಲಿ ಕ್ಯಾರೊಟಿನ್‌ನ ಇಲ್ಲದಿರುವಿಕೆಯು ಕೆಂಪು/ಕಿತ್ತಳೆ ಕ್ಯಾರೊಟಿನಾಯ್ಡ್‌ ಬಣ್ಣವು ಅವುಗಳ ಎರಿತ್ರೊಫೋರ್‌ಗಳಲ್ಲಿ ಇಲ್ಲದಿರುವುದಕ್ಕೆ ಕಾರಣವಾಯಿತು. ಇದರಿಂದಾಗಿ ಕಪ್ಪೆಗಳು ಹಸಿರು ಬಣ್ಣದ ಬದಲಿಗೆ ನೀಲಿ ಬಣ್ಣದಲ್ಲಿ ಕಂಡುಬಂದವು.[]

ಇರಿಡೊಫೋರ್‌ಗಳು ಮತ್ತು ಲ್ಯೂಕೊಫೋರ್‌ಗಳು

[ಬದಲಾಯಿಸಿ]

ಕೆಲವೊಮ್ಮೆ ಗ್ವಾನೊಫೋರ್‌ಗಳೆಂದು ಕರೆಯಲ್ಪಡುವ ಇರಿಡೊಫೋರ್‌ಗಳು ಬಣ್ಣದ ಜೀವಕೋಶಗಳಾಗಿದ್ದು, ಗ್ವಾನಿನ್‌ನಿಂದ ಮಾಡಲ್ಪಟ್ಟ ಸ್ಫಟಿಕದಂಥ ಕೀಮೊಕ್ರೋಮ್‌ಗಳ ಭಾಗಗಳನ್ನು ಬಳಸಿಕೊಂಡು ಬೆಳಕನ್ನು ಪ್ರತಿಫಲಿಸುತ್ತವೆ.[] ಅವು ಬೆಳಗಿದಾಗ ಒಟ್ಟುಗೂಡಿದ ಭಾಗಗಳಲ್ಲಿ ಬೆಳಕಿನ ವಿವರ್ತನೆಯಿಂದಾಗಿ ವರ್ಣವೈವಿಧ್ಯದ ಬಣ್ಣಗಳು ಉಂಟಾಗುತ್ತವೆ. ಸ್ಕೀಮೊಕ್ರೋಮ್‌ನ ಸ್ಥಾನವು ಗೋಚರಿಸುವ ಬಣ್ಣದ ಲಕ್ಷಣವನ್ನು ನಿರ್ಧರಿಸುತ್ತದೆ.[] ಬಯೋಕ್ರೋಮ್‌ಗಳನ್ನು ಬಣ್ಣದ ಶೋಧಕಗಳಾಗಿ ಬಳಸಿಕೊಂಡು ಇರಿಡೊಫೋರ್‌ಗಳು ಟಿಂಡಾಲ್ ಅಥವಾ ರೇಲೀಘ್ ಹರಡಿಕೆ ಎಂದು ಕರೆಯುವ ಬೆಳಕಿನ ಪರಿಣಾಮವನ್ನು ಉಂಟುಮಾಡಿ, ತಿಳಿ ನೀಲಿ ಅಥವಾ ಹಸಿರು ಬಣ್ಣಗಳನ್ನು ಉತ್ಪತ್ತಿ ಮಾಡುತ್ತವೆ.[]

ವರ್ಣಕೋಶಕ್ಕೆ ಸಂಬಂಧಿಸಿದ ಒಂದು ಪ್ರಕಾರ ಲ್ಯೂಕೊಫೋರ್ ಕೆಲವು ಮೀನುಗಳಲ್ಲಿ ನಿರ್ದಿಷ್ಟವಾಗಿ ಟೇಪ್‌ಟಮ್ ಲ್ಯುಸಿಡಮ್‌ನಲ್ಲಿ ಕಂಡುಬರುತ್ತದೆ. ಇರಿಡೊಫೋರ್‌ಗಳಂತೆ ಅವು ಬೆಳಕನ್ನು ಪ್ರತಿಫಲಿಸಲು ಸ್ಫಟಿಕದಂಥ ಪ್ಯೂರಿನ್‌ಗಳನ್ನು (ಹೆಚ್ಚಾಗಿ ಗ್ವಾನಿನ್) ಬಳಸಿಕೊಳ್ಳುತ್ತವೆ. ಇರಿಡೊಫೋರ್‌ಗಳಿಗೆ ಭಿನ್ನವಾಗಿ, ಲ್ಯೂಕೊಫೋರ್‌ಗಳು ಹೆಚ್ಚು ಸಂಘಟಿತ ಸ್ಫಟಿಕಗಳನ್ನು ಹೊಂದಿರುತ್ತವೆ, ಇದು ವಿವರ್ತನೆಯನ್ನು ಕಡಿಮೆಮಾಡುತ್ತದೆ. ಬಿಳಿ ಬೆಳಕಿನ ಮೂಲವನ್ನು ನೀಡಿದರೆ ಅವು ಬಿಳಿ ಪ್ರಕಾಶವನ್ನು ಉಂಟುಮಾಡುತ್ತವೆ. ಕ್ಸಾಂತೊಫೋರ್‌ಗಳು ಮತ್ತು ಎರಿತ್ರೊಫೋರ್‌ಗಳಂತೆ, ಮೀನುಗಳಲ್ಲಿ ಇರಿಡೊಫೋರ್‌ಗಳು ಮತ್ತು ಲ್ಯೂಕೊಫೋರ್‌ಗಳ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿಲ್ಲ. ಆದರೆ ಸಾಮಾನ್ಯವಾಗಿ ಇರಿಡೊಫೋರ್‌ಗಳು ವರ್ಣವೈವಿಧ್ಯದ ಅಥವಾ ಲೋಹದ ಹೊಳಪಿನ ಬಣ್ಣಗಳನ್ನು ಉಂಟುಮಾಡುತ್ತವೆ, ಅದೇ ಲ್ಯೂಕೊಫೋರ್‌ಗಳು ಪ್ರತಿಫಲಿಸುವ ಬಿಳಿ ಬಣ್ಣಗಳನ್ನು ಉತ್ಪತ್ತಿ ಮಾಡುತ್ತವೆ.[]

ಮೆಲನೊಫೋರ್‌ಗಳು

[ಬದಲಾಯಿಸಿ]
ರೂಪಾಂತರಿತ ಜೀಬ್ರಾಫಿಶ್ ಲಾರ್ವ, ಇದು ರೂಪಾಂತರಗೊಳ್ಳದ, ನಿಸರ್ಗ ಸಹಜ ಸ್ಥಿತಿಯಲ್ಲಿರುವ ಲಾರ್ವಕ್ಕೆ ಭಿನ್ನವಾಗಿ ಅದರ ಮೆಲನೊಫೋರ್‌ಗಳಲ್ಲಿ ಮೆಲನಿನ್ಅನ್ನು ಉತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.

ಮೆಲನೊಫೋರ್‌ಗಳು ಯೂಮೆಲನಿನ್‌ ಎಂಬ ಒಂದು ಪ್ರಕಾರದ ಮೆಲನಿನ್‌ಅನ್ನು ಹೊಂದಿರುತ್ತವೆ, ಬೆಳಕನ್ನು ಹೀರಿಕೊಳ್ಳುವ ಗುಣಲಕ್ಷಣದಿಂದಾಗಿ ಅದು ಕಪ್ಪು ಅಥವಾ ಗಾಢ ಕಂದು ಬಣ್ಣದಲ್ಲಿ ಕಂಡುಬರುತ್ತದೆ. ಇದು ಮೆಲನೊಸೋಮ್‌ಗಳೆಂಬ ಕೋಶಕಗಳಲ್ಲಿ ಗುಂಪುಗೂಡುತ್ತದೆ ಮತ್ತು ಜೀವಕೋಶದಾದ್ಯಂತ ಹರಡುತ್ತದೆ. ಯೂಮೆಲನಿನ್‌ ವೇಗವರ್ಧಿಸಿದ-ರಾಸಾಯನಿಕ-ಕ್ರಿಯೆಗಳ ಸರಣಿಯಲ್ಲಿ ಟೈರೊಸಿನ್‌‌ನಿಂದ ಉತ್ಪತ್ತಿಯಾಗುತ್ತದೆ. ಇದು ಕೆಲವು ಪೈರೋಲ್ ಸುರುಳಿಗಳೊಂದಿಗೆ ಡೈಹೈಡ್ರೋಕ್ಸಿಇಂಡೋಲ್‌ ಮತ್ತು ಡೈಹೈಡ್ರೋಕ್ಸಿಇಂಡೋಲ್‌-2-ಕಾರ್ಬೊಕ್ಸಿಲಿಕ್ ಆಮ್ಲದ ಘಟಕಗಳನ್ನು ಹೊಂದಿರುವ ಒಂದು ಸಂಕೀರ್ಣ ರಾಸಾಯನಿಕವಾಗಿದೆ.[] ಮೆಲನಿನ್‌ ಉತ್ಪತ್ತಿಯಲ್ಲಿರುವ ಒಂದು ಪ್ರಮುಖ ಕಿಣ್ವವೆಂದರೆ ಟೈರೊಸಿನೇಸ್‌. ಈ ಪ್ರೋಟೀನ್‌ನ ಕೊರತೆಯುಂಟಾದರೆ ಯಾವುದೇ ಮೆಲನಿನ್‌ ಉತ್ಪತ್ತಿಯಾಗುವುದಿಲ್ಲ, ಇದರಿಂದ ಹಲವು ರೀತಿಯ ಬಿಳಿಚಿಕೆ ಉಂಟಾಗಬಹುದು. ಕೆಲವು ಉಭಯಚರ ಜೀವಿಗಳಲ್ಲಿ ಯೂಮೆಲನಿನ್ ಒಂದಿಗೆ ಸೇರಿಕೊಂಡ ಇತರ ಬಣ್ಣಗಳಿರುತ್ತವೆ‌. ಉದಾಹರಣೆಗಾಗಿ, ಗಾಢ (ವೈನ್) ಕೆಂಪು ಬಣ್ಣದ ಒಂದು ಬಣ್ಣವು ಫೈಲೊಮೆಡುಸಿನ್ ಕಪ್ಪೆಗಳ ಮೆಲನೊಫೋರ್‌ಗಳಲ್ಲಿ ಕಂಡುಬಂದಿದೆ.[೧೦] ಇದನ್ನು ಅನಂತರ ಯೂಮೆಲನಿನ್‌ನ ಸುತ್ತಲೂ ಒಟ್ಟುಗೂಡುವ ಒಂದು ಪ್ಟೆರಿಡಿನ್‌ ಡೈಮರ್ ಪ್ಟೆರೊರೋಡಿನ್‌ ಎಂಬುದಾಗಿ ಗುರುತಿಸಲಾಯಿತು ಹಾಗೂ ಇದು ಆಸ್ಟ್ರೇಲಿಯಾ ಮತ್ತು ಪಪ್ವ ನ್ಯೂ ಜಿನಿಯಾದ ಒಂದು ಜಾತಿಯ ಮರ ಕಪ್ಪೆಗಳಲ್ಲೂ ಕಂಡುಬರುತ್ತದೆ. ಕಡಿಮೆ ಅಧ್ಯಯನ ಮಾಡಿದ ಇತರ ಜೀವಿಗಳು ಸಂಯುಕ್ತ ಮೆಲನೊಫೋರ್‌ ಬಣ್ಣಗಳನ್ನು ಹೊಂದಿವೆಯಾದರೂ, ಇಂದಿನವರೆಗೆ ಅಧ್ಯಯನ ಮಾಡಲಾದ ಹೆಚ್ಚಿನ ಮೆಲನೊಫೋರ್‌ಗಳು ಯೂಮೆಲನಿನ್ಅನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿವೆ.[೧೧]

ಮಾನವರು ಚರ್ಮ, ಕೂದಲು ಮತ್ತು ಕಣ್ಣಿನ ಬಣ್ಣವನ್ನು ಉಂಟುಮಾಡಲು ಕೇವಲ ಒಂದು ವರ್ಗದ ಬಣ್ಣದ ಜೀವಕೋಶವನ್ನು ಹೊಂದಿವೆ, ಇದು ಸಸ್ತನಿಗಳ ಮೆಲನೊಫೋರ್‌ಗಳಿಗೆ ಸಮಾನವಾಗಿದೆ. ಈ ಕಾರಣಕ್ಕಾಗಿ ಹಾಗೂ ಜೀವಕೋಶಗಳ ಹೆಚ್ಚಿನ ಸಂಖ್ಯೆ ಮತ್ತು ವಿವಿಧ ಬಣ್ಣವು ಸಾಮಾನ್ಯವಾಗಿ ಅವುಗಳನ್ನು ತುಂಬಾ ಸುಲಭವಾಗಿ ಗೋಚರಿಸುವಂತೆ ಮಾಡುವುದರಿಂದ, ಮೆಲನೊಫೋರ್‌ಗಳು ಹೆಚ್ಚು ವ್ಯಾಪಕವಾಗಿ ಅಧ್ಯಯನ ಮಾಡಲ್ಪಡುವ ವರ್ಣಕೋಶವಾಗಿವೆ. ಆದರೆ ಮೆಲನೊಫೋರ್‌ಗಳು ಮತ್ತು ಮೆಲನೊಸೈಟ್‌‌ಗಳ ರಚನೆಯ ನಡುವೆ ವ್ಯತ್ಯಾಸಗಳಿವೆ. ಯೂಮೆಲನಿನ್‌ನ ಜತೆಗೆ ಮೆಲನೊಸೈಟ್‌ಗಳು ಫೇಯೊಮೆಲನಿನ್‌ ಎಂಬ ಹಳದಿ/ಕೆಂಪು ಬಣ್ಣವನ್ನು ಉತ್ಪತ್ತಿ ಮಾಡಬಲ್ಲವು.

ಡೆಂಡ್ರೊಬೇಟ್ಸ್ ಪ್ಯುಮಿಲಿಯೊ, ಇದು ವಿಷವನ್ನು ಹೊರಸೂಸುವ ಒಂದು ಕಪ್ಪೆ.ಕೆಲವು ಪ್ರಕಾಶಮಾನ ಬಣ್ಣದ ಜಾತಿಗಳು ತಿಳಿಯದ ಬಣ್ಣದ ಸಂಯೋಜನೆಯ ಅಸಾಮಾನ್ಯ ವರ್ಣಕೋಶಗಳನ್ನು ಹೊಂದಿರುತ್ತವೆ.

ಸೈಯನೊಫೋರ್‌ಗಳು

[ಬದಲಾಯಿಸಿ]

ಕೆಲವು ಪ್ರಕಾರದ ಮ್ಯಾಂಡರಿನ್ ಮೀನುಗಳಲ್ಲಿ ಕಂಡುಬರುವ ನೀಲಿಬಣ್ಣಗಳು ಸ್ಕೀಮೊಕ್ರೋಮ್‌ಗಳಿಂದ ಉತ್ಪತ್ತಿಯಾಗುವುದಿಲ್ಲವೆಂದು 1995ರಲ್ಲಿ ಕಂಡುಹಿಡಿಯಲಾಯಿತು. ಬದಲಿಗೆ ಇದಕ್ಕೆ ಹಸಿರುನೀಲಿ ಬಣ್ಣದ(ಸೈಯನ್) ಬಯೋಕ್ರೋಮ್‌ ಎಂಬ ಅಜ್ಞಾತ ರಾಸಾಯನಿಕವೊಂದು ಕಾರಣವಾಗಿರುತ್ತದೆ.[] ಕ್ಯಾಲಿಯೊನಿಮಿಡ್ ಮೀನುಗಳ ಎರಡು ಜಾತಿಗಳ ಕೋಶಕಗಳಲ್ಲಿ ಕಂಡುಬರುವ ಈ ಬಣ್ಣವು ಪ್ರಾಣಿ ಜಗತ್ತಿನಲ್ಲಿ ಅಸಾಮಾನ್ಯವಾಗಿದೆ, ಏಕೆಂದರೆ ಇದುವರೆಗೆ ಕಂಡುಹಿಡಿಯಲಾದ ಇತರ ನೀಲಿ ಬಣ್ಣಗಳು ಸ್ಕೀಮೊಕ್ರೊಮಾಟಿಕ್ ಆಗಿವೆ. ಆದ್ದರಿಂದ ಒಂದು ಹೊಸ ವರ್ಣಕೋಶ ಪ್ರಕಾರ ಸೈಯನೊಫೋರ್‌ಅನ್ನು ಸೂಚಿಸಲಾಯಿತು. ಅವು ಅವುಗಳ ಜೀವಿವರ್ಗೀಕರಣದ ಪರಿಮಿತಿಯಲ್ಲಿ ಅಸಾಮಾನ್ಯವಾಗಿ ಕಂಡುಬಂದರೂ, ಸೈಯನೊಫೋರ್‌ಗಳು (ಮತ್ತು ಇತರ ಅಸಾಮಾನ್ಯ ವರ್ಣಕೋಶ ಪ್ರಕಾರಗಳು) ಇತರ ಮೀನು ಮತ್ತು ಉಭಯಚರಗಳಲ್ಲೂ ಇರುತ್ತವೆ. ಉದಾಹರಣೆಗಾಗಿ, ಲಕ್ಷಣ ನಿರೂಪಿಸದ ತಿಳಿ ಬಣ್ಣದ ವರ್ಣಕೋಶಗಳು ವಿಷ ಹೊರಸೂಸುವ ಕಪ್ಪೆಗಳು ಮತ್ತು ಗಾಜು ಕಪ್ಪೆಗಳಲ್ಲಿ ಕಂಡುಬರುತ್ತವೆ.[೧೨]

ಬಣ್ಣದ ಸ್ಥಾನಾಂತರ

[ಬದಲಾಯಿಸಿ]

ಹೆಚ್ಚಿನ ಜೀವಿಗಳು ವರ್ಣಕೋಶಗಳೊಳಗೆ ಬಣ್ಣವನ್ನು ಸ್ಥಾನಾಂತರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ, ಇದರಿಂದ ಬಣ್ಣದಲ್ಲಿ ಸ್ಪಷ್ಟ ಬದಲಾವಣೆಯಾಗುತ್ತದೆ. ದೈಹಿಕ ಬಣ್ಣ ಬದಲಾವಣೆ ಎಂದು ಕರೆಯಲ್ಪಡುವ ಈ ಕ್ರಿಯೆಯನ್ನು ಮೆಲನೊಫೋರ್‌ಗಳಲ್ಲಿ ಹೆಚ್ಚು ವ್ಯಾಪಕವಾಗಿ ಅಧ್ಯಯನ ಮಾಡಲಾಗುತ್ತದೆ ಏಕೆಂದರೆ ಮೆಲನಿನ್‌ ಗಾಢ ಮತ್ತು ಸ್ಪಷ್ಟವಾಗಿ ಗೋಚರವಾಗುವ ಬಣ್ಣವಾಗಿದೆ. ಹೆಚ್ಚುಕಡಿಮೆ ತೆಳು ಚರ್ಮವನ್ನು ಹೊಂದಿರುವ ಹೆಚ್ಚಿನ ಜೀವಿಗಳಲ್ಲಿ ಚರ್ಮದ ಮೆಲನೊಫೋರ್‌ಗಳು ಚಪ್ಪಟೆಯಾಗಿರುತ್ತವೆ ಮತ್ತು ಹೆಚ್ಚು ಜಾಗವನ್ನು ಆವರಿಸುತ್ತವೆ. ಆದರೆ ಪೂರ್ಣವಾಗಿ ಬೆಳೆದ ಸರೀಸೃಪಗಳಂತಹ ದಪ್ಪ ಚರ್ಮದ ಪದರಗಳನ್ನು ಹೊಂದಿರುವ ಪ್ರಾಣಿಗಳಲ್ಲಿ ಚರ್ಮದ ಮೆಲನೊಫೋರ್‌ಗಳು ಹೆಚ್ಚಾಗಿ ಇತರ ವರ್ಣಕೋಶಗಳೊಂದಿಗೆ ತ್ರಿಮಿತೀಯ ಘಟಕಗಳಾಗಿ ರೂಪುಗೊಳ್ಳುತ್ತವೆ. ಈ ಚರ್ಮದ ವರ್ಣಕೋಶ ಘಟಕಗಳು (DCU) ಮೇಲೆ ಕ್ಸಾಂತೊಫೋರ್ ಅಥವಾ ಎರಿತ್ರೊಫೋರ್ ಪದರವನ್ನು, ನಂತರ ಇರಿಡೊಫೋರ್ ಪದರವನ್ನು ಮತ್ತು ಕೊನೆಗೆ ಬಾಸ್ಕೆಟ್-ರೀತಿಯ ಮೆಲನೊಫೋರ್ ಪದರವನ್ನು ಹೊಂದಿರುತ್ತವೆ, ಇದರೊಂದಿಗೆ ಇರಿಡೊಫೋರ್‌ಗಳನ್ನು ಆವರಿಸುವ ಕ್ರಿಯೆಗಳೂ ಕಂಡುಬರುತ್ತವೆ.[೧೩]

ದೈಹಿಕ ಬಣ್ಣದ ಬದಲಾವಣೆಯಲ್ಲಿ ಎರಡೂ ರೀತಿಯ ಚರ್ಮದ ಮೆಲನೊಫೋರ್‌ಗಳು ಮುಖ್ಯವಾಗಿರುತ್ತವೆ. ಚಪ್ಪಟೆ ಚರ್ಮದ ಮೆಲನೊಫೋರ್‌ಗಳು ಹೆಚ್ಚಾಗಿ ಇತರ ವರ್ಣಕೋಶಗಳೊಂದಿಗೆ ಆವರಿಸಿರುತ್ತವೆ. ಆದ್ದರಿಂದ ಬಣ್ಣವು ಜೀವಕೋಶದಾದ್ಯಂತ ಹರಡಿದಾಗ ಚರ್ಮವು ಗಾಢವಾಗಿ ಗೋಚರಿಸುತ್ತದೆ. ಬಣ್ಣವು ಜೀವಕೋಶದ ಮಧ್ಯಭಾಗದಲ್ಲಿ ಒಟ್ಟುಗೂಡಿದಾಗ, ಇತರ ವರ್ಣಕೋಶಗಳಲ್ಲಿನ ಬಣ್ಣಗಳು ಬೆಳಕಿಗೆ ಒಡ್ಡಿಕೊಂಡು ಚರ್ಮವು ಅವುಗಳ ಬಣ್ಣವನ್ನು ಪಡೆಯುತ್ತದೆ. ಅದೇ ರೀತಿ DCUಗಳಲ್ಲಿ ಮೆಲನಿನ್‌ನ ಸಂಗ್ರಹದ ನಂತರ, ಕ್ಸಾಂತೊಫೋರ್ (ಹಳದಿ) ಚೆದುರಿದ ಬೆಳಕನ್ನು ಇರಿಡೊಫೋರ್ ಪದರದಿಂದ ಶೋಧಿಸುವ ಮೂಲಕ ಚರ್ಮವು ಹಸಿರು ಬಣ್ಣದಲ್ಲಿ ಗೋಚರಿಸುತ್ತದೆ. ಮೆಲನಿನ್‌ನ ಹರಡಿಕೆಯ ನಂತರ ಬೆಳಕು ಚೆದುರುವುದಿಲ್ಲ ಮತ್ತು ಚರ್ಮವು ಗಾಢವಾಗಿ ಕಂಡುಬರುತ್ತದೆ. ಇತರ ಜೀವವರ್ಣದ ವರ್ಣಕೋಶಗಳೂ ಸಹ ಬಣ್ಣದ ಸ್ಥಾನಾಂತರವನ್ನು ಮಾಡಬಲ್ಲವಾದ್ದರಿಂದ, ಹಲವು ವರ್ಣಕೋಶ ಪ್ರಕಾರಗಳನ್ನು ಹೊಂದಿರುವ ಪ್ರಾಣಿಗಳು ವಿಭಜನೆಯ ಪರಿಣಾಮವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಅದ್ಭುತ ರೀತಿಯಲ್ಲಿ ಚರ್ಮದ ಬಣ್ಣಗಳನ್ನು ಉತ್ಪತ್ತಿ ಮಾಡಬಲ್ಲವು.[೧೪],[೧೫]

ಬಣ್ಣ ಸೇರಿಸುವಿಕೆಯ ಸಂದರ್ಭದಲ್ಲಿ ಟೈಮ್-ಲ್ಯಾಪ್ಸ್ ಛಾಯಾಚಿತ್ರ ಗ್ರಹಣದಿಂದ ಚಿತ್ರಿಸಿದ ಒಂದು ಜೀಬ್ರಾಫಿಶ್ ಮೆಲನೊಫೋರ್

ಶೀಘ್ರ ಬಣ್ಣದ ಸ್ಥಾನಾಂತರದ ನಿಯಂತ್ರಣ ಮತ್ತು ಕಾರ್ಯವಿಧಾನಗಳನ್ನು ಹಲವಾರು ವಿವಿಧ ಜೀವಿಗಳಲ್ಲಿ, ನಿರ್ದಿಷ್ಟವಾಗಿ ಉಭಯಚರಗಳಲ್ಲಿ ಮತ್ತು ಈಲ್ ಮೀನುಗಳಲ್ಲಿ, ಅಧ್ಯಯನ ಮಾಡಲಾಗಿದೆ.[೧೬],[] ಈ ಕ್ರಿಯೆಯು ಹಾರ್ಮೋನಿನ, ನರದ ಅಥವಾ ಎರಡರ ನಿಯಂತ್ರಣದಲ್ಲಿರಬಹುದೆಂದು ಕಂಡುಹಿಡಿಯಲಾಗಿದೆ. ಬಣ್ಣವನ್ನು ಸ್ಥಾನಾಂತರಿಸುವ ನರರಾಸಾಯನಿಕಗಳು ಮೆಲನೊಫೋರ್‌ಗಳ ಮೇಲಿನ ವಾಹಕದ ಮೂಲಕ ನಾರ್‌ಅಡ್ರಿನಲಿನ್ಅನ್ನು ಒಳಗೊಳ್ಳುತ್ತವೆ.[೧೭] ಸ್ಥಾನಾಂತರವನ್ನು ನಿಯಂತ್ರಿಸುವುದರಲ್ಲಿ ಭಾಗವಹಿಸುವ ಪ್ರಾಥಮಿಕ ಹಾರ್ಮೋನುಗಳೆಂದರೆ ಮೆಲನೊಕಾರ್ಟಿನ್, ಮೆಲಟೋನಿನ್‌ ಮತ್ತು ಮೆಲನಿನ್‌ ಕೇಂದ್ರೀಕೃತ ಹಾರ್ಮೋನು (MCH). ಅವು ಮುಖ್ಯವಾಗಿ ಅನುಕ್ರಮವಾಗಿ ಪಿಟ್ಯುಟರಿ, ಪಿನಿಯಲ್ ಗ್ರಂಥಿ ಮತ್ತು ಹೈಪೊತಲಮಾಸ್‌ನಲ್ಲಿ ಉತ್ಪತ್ತಿಯಾಗುತ್ತವೆ. ಈ ಹಾರ್ಮೋನುಗಳು ಚರ್ಮದಲ್ಲಿ ಜೀವಕೋಶಗಳಿಂದ ಪ್ಯಾರಾಕ್ರಿನ್ ಶೈಲಿಯಲ್ಲಿಯೂ ಉತ್ಪತ್ತಿಯಾಗಬಹುದು. ಮೆಲನೊಫೋರ್‌ನ ಮೇಲ್ಮೈಯಲ್ಲಿ ಈ ಹಾರ್ಮೋನುಗಳು ನಿರ್ದಿಷ್ಟ G-ಪ್ರೋಟೀನ್ ಜೊತೆಗೂಡಿದ ವಾಹಕಗಳನ್ನು ಸಕ್ರಿಯಗೊಳಿಸುತ್ತವೆ, ಇದು ನಂತರ ಸಂಜ್ಞೆಯನ್ನು ಜೀವಕೋಶಕ್ಕೆ ಕಳುಹಿಸುತ್ತದೆ. ಮೆಲನೊಕಾರ್ಟಿನ್‌ಗಳು ಬಣ್ಣದ ಹರಡಿಕೆಯನ್ನು ಮಾಡುತ್ತವೆ. ಅದೇ ಮೆಲಟೋನಿನ್‌ ಮತ್ತು MCH ಬಣ್ಣವನ್ನು ಒಟ್ಟುಗೂಡಿಸುತ್ತವೆ.[೧೮]

MC1R[೧೯] ಸಮಾನ ವಸ್ತುವನ್ನೂ ಒಳಗೊಂಡಂತೆ ಹಲವಾರು ಮೆಲನೊಕಾರ್ಟಿನ್, MCH ಮತ್ತು ಮೆಲಟೋನಿನ್‌ ವಾಹಕಗಳು ಮೀನು[೨೦] ಮತ್ತು ಕಪ್ಪೆಗಳಲ್ಲಿ[೨೧] ಕಂಡುಬಂದಿವೆ. MC1R ಎಂಬುದು ಮಾನವರಲ್ಲಿ ಚರ್ಮ ಮತ್ತು ಕೂದಲಿನ ಬಣ್ಣವನ್ನು ನಿಯಂತ್ರಿಸುವ ಒಂದು ಮೆಲನೊಕಾರ್ಟಿನ್ ವಾಹಕವಾಗಿದೆ.[೨೨] MC1R ಜೀಬ್ರಾಫಿಶ್‌ನಲ್ಲಿ ಮೆಲನಿನ್‌ನ ಹರಡಿಕೆಗೆ ಅಗತ್ಯವಾಗಿರುತ್ತದೆಂದು ಕಂಡುಹಿಡಿಯಲಾಗಿದೆ‌.[೨೩] ಜೀವಕೋಶದೊಳಗೆ ಸೈಕ್ಲಿಕ್ ಅಡೆನೋಸಿನ್ ಮೋನೊಫಾಸ್ಫೇಟ್ಅನ್ನು (cAMP) ಬಣ್ಣದ ಸ್ಥಾನಾಂತರದ ಪ್ರಮುಖ ಎರಡನೇ ಸಂದೇಶವಾಹಕವೆಂದು ತೋರಿಸಲಾಗಿದೆ. ಇದುವರೆಗೆ ಸಂಪೂರ್ಣವಾಗಿ ತಿಳದಿಲ್ಲದ ಕಾರ್ಯವಿಧಾನದ ಮೂಲಕ cAMP, ಸೂಕ್ಷ್ಮನಾಲಿಕೆ‌ಗಳು ಮತ್ತು ಸೂಕ್ಷ್ಮತಂತುಗಳೊಂದಿಗೆ ಕೋಶಕಗಳನ್ನು ಹೊಂದಿರುವ ಬಣ್ಣವನ್ನು ಒಯ್ಯುವ ಆಣ್ವಿಕ ವಾಹಕಗಳನ್ನು ಕಾರ್ಯಪ್ರವೃತ್ತಗೊಳಿಸಲು ಪ್ರೋಟೀನ್ ಕಿನೇಸ್ A ಮೊದಲಾದ ಇತರ ಪ್ರೋಟೀನ್‌ಗಳ ಮೇಲೆ ಪ್ರಭಾವ ಬೀರುತ್ತದೆ.[೨೪],[೨೫],[೨೬]

ಮರೆಯ ಹೊಂದಿಸುವಿಕೆ(ಬ್ಯಾಕ್‌ಗ್ರೌಂಡ್ ಅಡಾಪ್ಟೇಶನ್)

[ಬದಲಾಯಿಸಿ]

ಹೆಚ್ಚಿನ ಮೀನುಗಳು, ಸರೀಸೃಪಗಳು ಮತ್ತು ಉಭಯಚರಗಳು ಪರಿಸರದ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಸೀಮಿತ ದೈಹಿಕ ಬಣ್ಣ ಬದಲಾವಣೆಗೆ ಒಳಗಾಗುತ್ತವೆ. ಮರೆಯ ಹೊಂದಿಸುವಿಕೆ ಎಂದು ಕರೆಯಲಾಗುವ ಈ ರೀತಿಯ ಮರೆಯಾಗುವುದು ಸಾಮಾನ್ಯವಾಗಿ ಸಮೀಪದ ಪರಿಸರದ ಬಣ್ಣವನ್ನು ಅನುಕರಿಸಲು ಚರ್ಮದ ಬಣ್ಣವು ಸ್ವಲ್ಪ ಮಟ್ಟದಲ್ಲಿ ಗಾಢವಾಗುವುದು ಅಥವಾ ತಿಳಿಯಾಗುವುದನ್ನು ಒಳಗೊಳ್ಳುತ್ತದೆ. ಮರೆಯ ಹೊಂದಿಸುವಿಕೆ ಪ್ರಕ್ರಿಯೆಯು ನೋಡುವ ಶಕ್ತಿಯನ್ನು ಆಧರಿಸಿರುತ್ತದೆ (ಪ್ರಾಣಿಯು ಹೊಂದಿಸಿಕೊಳ್ಳಲು ಪರಿಸರವನ್ನು ನೋಡುವುದು ಅಗತ್ಯವಾಗಿರುತ್ತದೆ)[೨೭] ಮತ್ತು ಮೆಲನೊಫೋರ್‌ಗಳಲ್ಲಿ ಮೆಲನಿನ್‌ನ‌ ಸ್ಥಾನಾಂತರವು ಬಣ್ಣ ಬದಲಾವಣೆಯಲ್ಲಿ ಪ್ರಮುಖ ಅಂಶವಾಗಿದೆ ಎಂದು ಕಂಡುಹಿಡಿಯಲಾಗಿದೆ.[೧೮] ಗೋಸುಂಬೆ ಮತ್ತು ಅನೋಲ್‌ಗಳಂತಹ ಕೆಲವು ಪ್ರಾಣಿಗಳು ಅತಿಶೀಘ್ರದಲ್ಲಿ ಹಲವಾರು ಬಣ್ಣಗಳನ್ನು ಉತ್ಪತ್ತಿಮಾಡುವ ಸಾಮರ್ಥ್ಯವಿರುವ ಹೆಚ್ಚು ಅಭಿವೃದ್ಧಿಹೊಂದಿದ ಮರೆಯ ಹೊಂದಿಸುವಿಕೆ ಪ್ರತಿಕ್ರಿಯೆಯನ್ನು ಹೊಂದಿರುತ್ತವೆ. ಅವು ಸುಮ್ಮನೆ ಅವುಗಳ ಪರಿಸರವನ್ನು ಅನುಕರಿಸುವ ಬದಲಿಗೆ ತಾಪಮಾನ, ಮನೋಭಾವನೆ, ಒತ್ತಡದ ಮಟ್ಟ ಮತ್ತು ಸಾಮಾಜಿಕ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಬಣ್ಣ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿಸಿಕೊಂಡಿವೆ.

ಬೆಳವಣಿಗೆ

[ಬದಲಾಯಿಸಿ]
ಬೆಳೆಯುತ್ತಿರುವ ಕಶೇರುಕದ ಮುಂಡಭಾಗದ ಅಡ್ಡ ಕೊಯ್ತ, ಇದು ಕ್ರೊಮಟೊಬ್ಲಾಸ್ಟ್ ಸ್ಥಳಾಂತರಿಕೆಯ ಪಕ್ಕದ (ಕೆಂಪು) ಮತ್ತು ಮಧ್ಯದ (ನೀಲಿ) ಮಾರ್ಗಗಳನ್ನು ತೋರಿಸುತ್ತದೆ.

ಕಶೇರುಕಗಳ ಭ್ರೂಣದ ಬೆಳವಣಿಗೆಯ ಸಂದರ್ಭದಲ್ಲಿ, ವರ್ಣಕೋಶಗಳು ನರದ ತುದಿಯಲ್ಲಿ ಉತ್ಪತ್ತಿಯಾಗುವ ಹಲವಾರು ಜೀವಕೋಶ ಪ್ರಕಾರಗಳಲ್ಲಿ ಒಂದಾಗಿದೆ, ಇದು ನರ ನಾಳದ ಅಂಚಿನಲ್ಲಿ ಬೆಳೆಯುವ ಒಂದು ಜತೆ ಜೀವಕೋಶಗಳ ಚೂರು ಆಗಿದೆ. ಈ ಜೀವಕೋಶಗಳು ತುಂಬಾ ದೂರದವರೆಗೆ ಸ್ಥಾನಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ, ಇದು ವರ್ಣಕೋಶಗಳು ಚರ್ಮ, ಕಣ್ಣು, ಕಿವಿ ಮತ್ತು ಮಿದುಳನ್ನೂ ಒಳಗೊಂಡಂತೆ ದೇಹದ ಅನೇಕ ಅಂಗಗಳಲ್ಲಿಗೆ ಸಾಗುವಂತೆ ಮಾಡುತ್ತದೆ. ನರದ ತುದಿಯನ್ನು ತರಂಗಚಲನೆಯಲ್ಲಿ ಬಿಟ್ಟು, ವರ್ಣಕೋಶಗಳು ಚರ್ಮದ ಮೂಲಕ ಪಕ್ಕದ ಮಾರ್ಗವನ್ನು ತೆಗೆದುಕೊಂಡು, ಆಧಾರಭೂತವಾದ ತೆಳು-ಪದರ(ಬೇಸಲ್ ಲಾಮಿನ)ದಲ್ಲಿರುವ ಸಣ್ಣ ರಂಧ್ರಗಳ ಮೂಲಕ ಬಾಹ್ಯಕೋಶಸ್ತರವನ್ನು ಪ್ರವೇಶಿಸುತ್ತವೆ ಅಥವಾ ಸೊಮೈಟ್‌ ಮತ್ತು ನರ ನಾಳದ ನಡುವಿನ ಮಧ್ಯಮಾರ್ಗವನ್ನು ತೆಗೆದುಕೊಳ್ಳುತ್ತವೆ. ಇದಕ್ಕೆ ಹೊರತಾದವೆಂದರೆ ಕಣ್ಣಿನ ರೆಟಿನಾದ ಬಣ್ಣದಿಂದ ಕೂಡಿದ ಎಪಿತೀಲಿಯಮ್‌ನ ಮೆಲನೊಫೋರ್‌ಗಳು. ಇವು ನರದ ತುದಿಯಿಂದ ಬಂದವಲ್ಲ, ಬದಲಿಗೆ ನರ ನಾಳದ ಹೊರಗಿನಚೀಲವು ಕಣ್ಣಿನ ಬಟ್ಟಲನ್ನು ರಚಿಸುತ್ತದೆ, ಇದು ನಂತರ ರೆಟಿನಾವನ್ನು ರೂಪಿಸುತ್ತದೆ.

ಬಹುಪ್ರಬಲ ವರ್ಣಕೋಶ ಪೂರ್ವಸೂಚಕ ಜೀವಕೋಶಗಳು (ಕ್ರೊಮಾಟೊಬ್ಲಾಸ್ಟ್‌ಗಳೆಂದು ಕರೆಯುತ್ತಾರೆ) ಯಾವಾಗ ಮತ್ತು ಹೇಗೆ ಅವುಗಳ ಮರಿ ಉಪಪ್ರಕಾರಗಳಾಗಿ ಬೆಳೆಯುತ್ತವೆ ಎಂಬುದು ಪ್ರಸ್ತುತದಲ್ಲಿರುವ ಸಂಶೋಧನೆಯ ಕ್ಷೇತ್ರವಾಗಿದೆ. ಉದಾಹರಣೆಗಾಗಿ, ಜೀಬ್ರಾಫಿಶ್ ಭ್ರೂಣಗಳಲ್ಲಿ ಫಲೀಕರಣವಾದ 3 ದಿನಗಳ ನಂತರ, ಬೆಳೆದ-ಮೀನಿನಲ್ಲಿ ಕಂಡುಬರುವ ಪ್ರತಿಯೊಂದು ವರ್ಗದ ಜೀವಕೋಶಗಳು - ಮೆಲನೊಫೋರ್‌ಗಳು, ಕ್ಸಾಂತೊಫೋರ್‌ಗಳು ಮತ್ತು ಇರಿಡೊಫೋರ್‌ಗಳು - ಅದಾಗಲೇ ಕಂಡುಬರುತ್ತವೆ ಎಂದು ತಿಳಿಯಲಾಗಿದೆ. ಕಿಟ್ , ಸಾಕ್ಸ್10 ಮತ್ತು ಮಿಟ್ಫ್ ಮೊದಲಾದ ನಕಲುಮಾಡುವ ಅಂಶಗಳು ವರ್ಣಕೋಶದ ವೈಲಕ್ಷಣವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ರೂಪಾಂತರಿತ ಮೀನನ್ನು ಬಳಸಿಕೊಂಡ ಅಧ್ಯಯನಗಳು ಕಂಡುಹಿಡಿದಿವೆ.[೨೮] ಆ ಪ್ರೋಟೀನ್‌ಗಳ ಕೊರತೆಯುಂಟಾದರೆ ವರ್ಣಕೋಶಗಳು ಪ್ರಾದೇಶಿಕವಾಗಿ ಅಥವಾ ಸಂಪೂರ್ಣವಾಗಿ ಇರುವುದಿಲ್ಲ, ಇದು ಲ್ಯೂಸಿಸ್ಟಿಕ್ ರೋಗಕ್ಕೆ ಕಾರಣವಾಗುತ್ತದೆ.

ಪ್ರಾಯೋಗಿಕ ಅನ್ವಯಗಳು

[ಬದಲಾಯಿಸಿ]

ಮೂಲಭೂತ ಸಂಶೋಧನೆಯಿಂದ ವರ್ಣಕೋಶಗಳ ಬಗ್ಗೆ ಉತ್ತಮ ರೀತಿಯಲ್ಲಿ ತಿಳಿದುದರ ಜತೆಗೆ, ಈ ಜೀವಕೋಶಗಳನ್ನು ಅನ್ವಯಿಕ ಸಂಶೋಧನಾ ಉದ್ದೇಶಗಳಿಗೂ ಬಳಸಿಕೊಳ್ಳಲಾಗುತ್ತದೆ. ಉದಾಹರಣೆಗಾಗಿ, ಜೀಬ್ರಾಫಿಶ್ ಲಾರ್ವಗಳನ್ನು ಬೆಳೆದ-ಮೀನಿನಲ್ಲಿ ಕಂಡುಬರುವಂತೆ ವ್ಯವಸ್ಥಿತ ಸಮಾಂತರ ಪಟ್ಟೆಯುಳ್ಳ ರಚನೆಯನ್ನು ನಿಷ್ಕೃಷ್ಟವಾಗಿ ರಚಿಸಲು ವರ್ಣಕೋಶಗಳು ಹೇಗೆ ಸಂಘಟಿಸುತ್ತವೆ ಮತ್ತು ಹರಡುತ್ತವೆ ಎಂಬುದನ್ನು ಅಧ್ಯಯನ ಮಾಡಲು ಬಳಸಿಕೊಳ್ಳಲಾಗುತ್ತದೆ.[೨೯] ಇದನ್ನು ವಿಕಸನೀಯ ಬೆಳವಣಿಗೆಯ ಜೀವಶಾಸ್ತ್ರದ ಕ್ಷೇತ್ರದಲ್ಲಿನ ಕ್ರಮವನ್ನು ತಿಳಿಯುವ ಒಂದು ಉಪಯುಕ್ತ ಮಾದರಿ ವ್ಯವಸ್ಥೆಯೆಂದು ತಿಳಿಯಲಾಗುತ್ತದೆ. ವರ್ಣಕೋಶ ಜೀವಶಾಸ್ತ್ರವನ್ನು ಮೆಲನೋಮ ಮತ್ತು ಬಿಳಿಚಿಕೆಯನ್ನೂ ಒಳಗೊಂಡಂತೆ ಮಾನವನ ಸ್ಥಿತಿ ಅಥವಾ ಕಾಯಿಲೆಯ ಮಾದರಿಯನ್ನು ರೂಪಿಸಲೂ ಬಳಸಲಾಗುತ್ತದೆ. ಮೆಲನೊಫೋರ್-ವಿಶೇಷ ಚಿನ್ನದ ಜೀಬ್ರಾಫಿಶ್ ಬಣ್ಣಕ್ಕೆ ಕಾರಣವಾದ ಜೀನ್ Slc24a5 ಮಾನವನ ಚರ್ಮದ ಬಣ್ಣಕ್ಕೆ ಪ್ರಬಲವಾಗಿ ಸಂಬಂಧಿಸಿದ ಸಮಾನ ಅಂಶವನ್ನು ಹೊಂದಿದೆಯೆಂದು ಇತ್ತೀಚೆಗೆ ತೋರಿಸಲಾಗಿದೆ.[೩೦]

ವರ್ಣಕೋಶಗಳನ್ನು ಶೀತ-ರಕ್ತದ ಜೀವಿಗಳಲ್ಲಿ ಅಂಧತೆಯ ಜೈವಿಕಗುರುತಾಗಿ ಬಳಸಲಾಗುತ್ತದೆ, ಸ್ವಲ್ಪ ದೃಷ್ಟಿಯ ನ್ಯೂನ್ಯತೆಯನ್ನು ಹೊಂದಿರುವ ಪ್ರಾಣಿಗಳು ಬೆಳಕಿನ ಪರಿಸರಕ್ಕೆ ಮರೆಯ ಹೊಂದಿಸುವಿಕೆಯನ್ನು ಉಂಟುಮಾಡಲು ವಿಫಲಗೊಳ್ಳುತ್ತವೆ.[೨೭] ಮಾನವನ ಮೆಲನೊಫೋರ್‌ಗಳಲ್ಲಿ ಬಣ್ಣದ ಸ್ಥಾನಾಂತರದಲ್ಲಿ ಮಾಧ್ಯಮವಾಗಿರುವ ವಾಹಕಗಳು ಹಸಿವಿನ ನಿಗ್ರಹ ಮತ್ತು ಚರ್ಮ ಕಂದಾಗುವುದು ಮೊದಲಾದ ಕ್ರಿಯೆಗಳಲ್ಲಿ ಭಾಗವಹಿಸುತ್ತವೆಂದು ತಿಳಿಯಲಾಗಿದೆ, ಅವನ್ನು ಔಷಧಿಗಳಿಗೆ ಗುರಿಯಾಗುವಂತೆ ಮಾಡುತ್ತದೆ.[೧೯] ಆದ್ದರಿಂದ ಔಷಧಿಯ ಕಂಪನಿಗಳು ಆಫ್ರಿಕಾದ ಉಗುರುಗಳಿರುವ ಕಪ್ಪೆಗಳಿಂದ ಮೆಲನೊಫೋರ್‌ಗಳನ್ನು ಬಳಸಿಕೊಂಡು ಅತಿ ಶೀಘ್ರವಾಗಿ ಪ್ರಬಲ ಜೀವಸಕ್ರಿಯ ಸಂಯುಕ್ತಗಳನ್ನು ಗುರುತಿಸಲು ಜೀವಶಾಸ್ತ್ರದ ವಿಶ್ಲೇಷಣೆಯೊಂದನ್ನು ಅಭಿವೃದ್ಧಿಪಡಿಸಿವೆ.[೩೧] ಇತರ ವಿಜ್ಞಾನಿಗಳು ಮೆಲನೊಫೋರ್‌ಗಳನ್ನು ಜೀವಸಂವೇದಕವಾಗಿ[೩೨] ಬಳಸುವುದಕ್ಕಾಗಿ ಮತ್ತು ಅತಿ ಶೀಘ್ರದಲ್ಲಿ ಕಾಯಿಲೆಯನ್ನು ಪತ್ತೆಮಾಡುವುದಕ್ಕಾಗಿ (ಮೀನಿನ ಮೆಲನೊಫೋರ್‌ಗಳಲ್ಲಿ ನಾಯಿಕೆಮ್ಮು(ಪರ್ಟ್ಯುಸಿಸ್) ವಿಷವು ಬಣ್ಣದ ಒಟ್ಟುಗೂಡುವಿಕೆಯನ್ನು ತಡೆಯುತ್ತದೆ ಎಂಬ ಆವಿಷ್ಕಾರದ ಆಧಾರದಲ್ಲಿ) ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ.[೩೩] ವರ್ಣಕೋಶದಿಂದಾಗುವ ಬಣ್ಣ ಬದಲಾವಣೆಯ ಪ್ರಬಲ ಮಿಲಿಟರಿ ಅನ್ವಯಗಳನ್ನು ಸೂಚಿಸಲಾಗಿದೆ, ಮುಖ್ಯವಾಗಿ ಸಕ್ರಿಯವಾಗಿ ಅಡಗಿಕೊಳ್ಳಲು.[೩೪]

ಶೀರ್ಷಪಾದಿ ವರ್ಣಕೋಶಗಳು

[ಬದಲಾಯಿಸಿ]
ಮರಿ ಕಟಲ್‌ಮೀನು, ಸ್ಥಳೀಯ ಪರಿಸರವನ್ನು ಅನುಕರಿಸಲು ಹಿನ್ನೆಲೆ ಹೊಂದಾವಣೆಯನ್ನು ಬಳಸಿಕೊಂಡಿದೆ.

ಕೊಲಿಯಾಡ್ ಶೀರ್ಷಪಾದಿಗಳು ಸಂಕೀರ್ಣವಾದ ಬಹುಜೀವಕೋಶಗಳ ಅಂಗಗಳನ್ನು ಹೊಂದಿರುತ್ತವೆ, ಅವನ್ನು ಅವು ವೇಗವಾಗಿ ಬಣ್ಣವನ್ನು ಬದಲಾಯಿಸಿಕೊಳ್ಳಲು ಬಳಸಿಕೊಳ್ಳುತ್ತವೆ. ಇದು ತಿಳಿ ಬಣ್ಣದ ಸ್ಕ್ವಿಡ್, ಕಟಲ್‌ಮೀನು ಮತ್ತು ಅಕ್ಟೋಪಸ್‌‌ಗಳಲ್ಲಿ ಹೆಚ್ಚು ಗಮನಾರ್ಹವಾಗಿರುತ್ತದೆ. ಪ್ರತಿಯೊಂದು ವರ್ಣಕೋಶ ಘಟಕವು ಒಂದು ವರ್ಣಕೋಶ ಜೀವಕೋಶ ಹಾಗೂ ಅಸಂಖ್ಯಾತ ಸ್ನಾಯು, ನರ, ಗ್ಲಯ ಮತ್ತು ಪೊರೆ ಜೀವಕೋಶಗಳಿಂದ ಮಾಡಲ್ಪಟ್ಟಿರುತ್ತದೆ.[೩೫] ವರ್ಣಕೋಶ ಜೀವಕೋಶದೊಳಗೆ, ಬಣ್ಣದ ಕಣಗಳು ಸೈಟೊಇಲಾಸ್ಟಿಕ್ ಸ್ಯಾಕ್ಕುಲಸ್ ಎಂಬ ಒಂದು ಹಿಗ್ಗಿಸಬಹುದಾದ ಚೀಲದಲ್ಲಿ ಆವರಿಸಿರುತ್ತವೆ. ಬಣ್ಣವನ್ನು ಬದಲಾಯಿಸಲು ಈ ಪ್ರಾಣಿಯು ಸ್ನಾಯುವಿನ ಸಂಕೋಚನದ ಮೂಲಕ ಸ್ಯಾಕ್ಕುಲಸ್ ರಚನೆಯನ್ನು ಅಥವಾ ಗಾತ್ರವನ್ನು ವಿರೂಪಗೊಳಿಸುತ್ತದೆ, ಇದು ಅದರ ಅರೆಪಾರದರ್ಶಕತೆ, ಪಾರದರ್ಶಕತೆ ಅಥವಾ ಅಪಾರದರ್ಶಕತೆಯನ್ನು ಬದಲಾಯಿಸುತ್ತದೆ. ಇದು ಮೀನುಗಳು, ಉಭಯಚರಗಳು ಮತ್ತು ಸರೀಸೃಪಗಳಲ್ಲಿ ಬಳಸಲ್ಪಡುವ ಕಾರ್ಯವಿಧಾನಗಳಿಂದ ಭಿನ್ನವಾಗಿದೆ, ಅವುಗಳಲ್ಲಿ ಸ್ಯಾಕ್ಕುಲಸ್‌ನ ಆಕಾರವೇ ಬದಲಾಗುತ್ತದೆ ಕೋಶಕಗಳ ಜೀವಕೋಶ. ಆದರೂ ಅಂತಹುದೇ ಪರಿಣಾಮವು ಕಂಡುಬರುತ್ತದೆ.

ಅಕ್ಟೋಪಸ್‌ಗಳು ವರ್ಣಕೋಶಗಳನ್ನು ಸಂಕೀರ್ಣ, ತರಂಗ-ರೀತಿಯ ಬಣ್ಣದ ತೋರಿಸುವಿಕೆಯಲ್ಲಿ ಬಳಸಿಕೊಳ್ಳಬಲ್ಲವು, ಇದರಿಂದ ವೈವಿಧ್ಯಮಯ ಅತಿ ಶೀಘ್ರದ ಬಣ್ಣ ಬದಲಾಗುವಿಕೆಯು ಕಂಡುಬರುತ್ತದೆ. ವರ್ಣಕೋಶಗಳನ್ನು ಕಾರ್ಯಪ್ರವೃತ್ತಗೊಳಿಸುವ ನರಗಳು ಮಿದುಳಿನಲ್ಲಿ ಅವು ನಿಯಂತ್ರಿಸುವ ವರ್ಣಕೋಶಗಳ ನರಗಳ ರೀತಿಯಲ್ಲಿಯೇ ನೆಲೆಗೊಂಡಿವೆ. ಅಂದರೆ ಬಣ್ಣ ಬದಲಾವಣೆಯ ನಮೂನೆಯು ನರದ ಸಕ್ರಿಯಗೊಳ್ಳುವ ನಮೂನೆಯೊಂದಿಗೆ ಸರಿಹೊಂದುತ್ತದೆ. ನರಗಳು ಒಂದರ ನಂತರ ಮತ್ತೊಂದರಂತೆ ಸಕ್ರಿಯಗೊಳ್ಳುವುದರಿಂದ, ಇದು ಬಣ್ಣದ ಬದಲಾವಣೆಯು ಏಕೆ ತರಂಗಗಳಲ್ಲಿ ಕಂಡುಬರುತ್ತದೆ ಎಂಬುದನ್ನು ವಿವರಿಸಬಹುದು.[೩೬] ಗೋಸುಂಬೆಗಳಂತೆ, ಶೀರ್ಷಪಾದಿಗಳೂ ಸಹ ಸಾಮಾಜಿಕ ಪರಸ್ಪರ ಕ್ರಿಯೆಗೆ ದೈಹಿಕ ಬಣ್ಣ ಬದಲಾವಣೆಯನ್ನು ಬಳಸಿಕೊಳ್ಳುತ್ತವೆ. ಅವು ಮರೆಯ ಹೊಂದಿಸುವಿಕೆಯಲ್ಲಿ ಹೆಚ್ಚು ಕುಶಲತೆಯನ್ನು ಪಡೆದಿವೆ, ಅವು ಅವುಗಳಿರುವ ಪರಿಸರಕ್ಕೆ ಬಣ್ಣ ಮತ್ತು ರೂಪಗಳೆರಡನ್ನೂ ಹೊಂದಿಸುವ ಸಾಮರ್ಥ್ಯವನ್ನು ಹೊಂದಿವೆ.

ಬ್ಯಾಕ್ಟೀರಿಯಾ

[ಬದಲಾಯಿಸಿ]

ವರ್ಣಕೋಶಗಳು ಫೋಟೊಟ್ರೋಫಿಕ್ ಬ್ಯಾಕ್ಟೀರಿಯಾಗಳ ಪೊರೆಗಳಲ್ಲೂ ಕಂಡುಬರುತ್ತವೆ. ಬ್ಯಾಕ್ಟೀರಿಯಾದಲ್ಲಿ ಮೂಲಭೂತವಾಗಿ ದ್ಯುತಿಸಂಶ್ಲೇಷಣೆಗೆ ಬಳಸಿಕೊಳ್ಳಲ್ಪಡುವ ವರ್ಣಕೋಶಗಳು ಬ್ಯಾಕ್ಟೀರಿಯೊಕ್ಲೋರೋಫಿಲ್ ಬಣ್ಣಗಳನ್ನು ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತವೆ.[೩೭] ರೋಡೊಸ್ಪಿರಿಲಮ್ ರುಬ್ರಮ್ ಮೊದಲಾದ ಕೆನ್ನೀಲಿ ಬ್ಯಾಕ್ಟೀರಿಯಾದಲ್ಲಿ, ಬೆಳಕನ್ನು-ಸಂಗ್ರಹಿಸುವ ಪ್ರೋಟೀನ್‌ಗಳು ವರ್ಣಕೋಶ ಪೊರೆಗಳಿಗೆ ಮುಖ್ಯವಾಗಿರುತ್ತವೆ. ಆದರೆ ಹಸಿರು ಸಲ್ಫರ್ ಬ್ಯಾಕ್ಟೀರಿಯಾದಲ್ಲಿ ಅವು ಕ್ಲೋರೊಸೋಮ್‌ಗಳೆಂದು ಕರೆಯಲ್ಪಡುವ ವಿಶೇಷ ಆಂಟೆನ ಸಂಕೀರ್ಣಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ.[೩೮]

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕ್ರೋಮೊಫೋರೊ

ಟಿಪ್ಪಣಿಗಳು

[ಬದಲಾಯಿಸಿ]
  1. ಸ್ಯಾಂಗಿಯೊವ್ಯಾನಿ G. ಡಿಸ್ಕ್ರೈಜಿಯೋನ್ ಡಿ ಉನ್ ಪಾರ್ಟಿಕೊಲರೆ ಸಿಸ್ಟೆಮ ಡಿ ಆರ್ಗನಿ ಕ್ರೋಮೊಫೋರೊ ಎಸ್ಪಾನ್ಸಿವೊ-ಡರ್ಮೋಯ್ಡಿಯೊ ಇ ದೈ ಫೆನೋಮೆನಿ ಚೆ ಎಸ್ಸೊ ಪ್ರೊಡ್ಯೂಸ್, ಸ್ಕೋಪರ್ಟೊ ನೈ ಮೊಲ್ಲುಸ್ಚಿ ಸೆಫಾಲೊಸೊ. G. ಎನ್ಸೈಕ್ಲೊಪೀಡಿಕೊ ನಪೋಲಿ . 1819; 9:1–13.
  2. ೨.೦ ೨.೧ ಬಗ್ನಾರ JT. ಸೈಟೋಲಜಿ ಆಂಡ್ ಸೈಟೊಫಿಸಿಯಾಲಜಿ ಆಫ್ ನಾನ್-ಮೆಲನೊಫೋರ್ ಪಿಗ್ಮೆಂಟ್ ಸೆಲ್ಸ್. ಇಂಟ್ ರಿವ್ ಸೈಟಾಲ್ . 1966; 20:173–205. PMID 5337298
  3. ಫಾಕ್ಸ್, DL. ಆನಿಮಲ್ ಬಯೋಕ್ರೋಮ್ಸ್ ಆಂಡ್ ಸ್ಟ್ರಕ್ಚರಲ್ ಕಲರ್ಸ್: ಫಿಸಿಕಲ್, ಕೆಮಿಕಲ್, ಡಿಸ್ಟ್ರಿಬ್ಯೂಷನಲ್ ಆಂಡ್ ಫಿಸಿಯೊಲಾಜಿಕಲ್ ಫೀಚರ್ಸ್ ಆಫ್ ಕಲರ್ಡ್ ಬಾಡೀಸ್ ಇನ್ ದಿ ಆನಿಮಲ್ ವರ್ಲ್ಡ್. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, 1976. ISBN 0520023471
  4. ಮ್ಯಾಟ್ಸುಮೋಟೊ J. ಸ್ಟಡೀಸ್ ಆಫ್ ಫೈನ್ ಸ್ಟ್ರಕ್ಚರ್ ಆಂಡ್ ಸೈಟೊಕೆಮಿಕಲ್ ಪ್ರೋಪರ್ಟೀಸ್ ಆಫ್ ಎರಿತ್ರೊಫೋರ್ಸ್ ಇನ್ ಸೋರ್ಡ್‌ಟೈಲ್, ಕ್ಸೈಫೊಫೋರಸ್ ಹೆಲ್ಲೆರಿ . J ಸೆಲ್ ಬಯಾಲ್ . 1965; 27:493–504. PMID 5885426
  5. ಬಗ್ನಾರ JT. ಕಂಪೇರೆಟಿವ್ ಅನಾಟಮಿ ಆಂಡ್ ಫಿಸಿಯಾಲಜಿ ಆಫ್ ಪಿಗ್ಮೆಂಟ್ ಸೆಲ್ಸ್ ಇನ್ ನಾನ್‌ಮ್ಯಾಮಲಿಯನ್ ಟಿಶ್ಯೂಸ್. ದಿ ಪಿಗ್ಮೆಂಟರಿ ಸಿಸ್ಟಮ್: ಫಿಸಿಯಾಲಜಿ ಆಂಡ್ ಪಾತೊಫಿಸಿಯಾಲಜಿ , ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 1998. ISBN 0-19-509861-7
  6. ಟೈಲರ್ JD. ದಿ ಇಫೆಕ್ಟ್ಸ್ ಆಫ್ ಇಂಟರ್ಮೆಡಿನ್ ಆನ್ ದಿ ಅಲ್ಟ್ರಾಸ್ಟ್ರಕ್ಚರ್ ಆಫ್ ಆಂಫಿಬಿಯನ್ ಇರಿಡೊಫೋರ್ಸ್. ಗೆನ್ ಕಾಂಪ್ ಎಂಡೊಕ್ರಿನಾಲ್ . 1969; 12:405-16. PMID 5769930
  7. ಮೋರಿಸನ್ RL. ಎ ಟ್ರಾನ್ಸ್‌ಮಿಶನ್ ಎಲೆಕ್ಟ್ರಾನ್ ಮೈಕ್ರೊಸ್ಕೋಪಿಕ್ (TEM) ಮೆಥಡ್ ಫಾರ್ ಡಿಟರ್ಮೈನಿಂಗ್ ಸ್ಟ್ರಕ್ಚರಲ್ ಕಲರ್ಸ್ ರಿಫ್ಲೆಕ್ಟೆಡ್ ಬೈ ಲಿಜಾರ್ಡ್ ಇರಿಡೊಫೋರ್ಸ್. ಪಿಗ್ಮೆಂಟ್ ಸೆಲ್ ರೆಸ್ . 1995; 8:28–36. PMID 7792252
  8. ೮.೦ ೮.೧ ೮.೨ ೮.೩ ಫ್ಯುಜಿ R. ದಿ ರೆಗ್ಯುಲೇಶನ್ ಆಫ್ ಮೊಟೈಲ್ ಆಕ್ಟಿವಿಟಿ ಇನ್ ಫಿಶ್ ಕ್ರೊಮಟೊಫೋರ್ಸ್. ಪಿಗ್ಮೆಂಟ್ ಸೆಲ್ ರೆಸ್ . 2000; 13:300-19. PMID 11041206
  9. ಇಟೊ S ಆಂಡ್ ವಾಕಮಾಟ್ಸು K. ಕ್ವಾಂಟಿಟೇಟಿವ್ ಅನಾಲಸಿಸ್ ಆಫ್ ಯೂಮೆಲನಿನ್ ಆಂಡ್ ಫಿಯೊಮೆಲನಿನ್ ಇನ್ ಹ್ಯೂಮನ್ಸ್, ಮೈಸ್ ಆಂಡ್ ಅದರ್ ಆನಿಮಲ್ಸ್: ಎ ಕಂಪೇರೆಟಿವ್ ರಿವ್ಯೂ. ಪಿಗ್ಮೆಂಟ್ ಸೆಲ್ ರೆಸ್ . 2003; 16:523-31. PMID 12950732
  10. ಬಗ್ನಾರ, J.T. ಮತ್ತು ಇತರರು (1973). »ಕಲರ್ ಚೇಂಜಸ್, ಅನ್‌ಯೂಸ್ವಲ್ ಮೆಲನೊಸೋಮ್ಸ್ ಆಂಡ್ ಎ ನ್ಯೂ ಪಿಗ್ಮೆಂಟ್ ಫ್ರಮ್ ಲೀಫ್ ಫ್ರಾಗ್ಸ್«. ಸೈನ್ಸ್ 182 (4):1034–5. PMID 4748673
  11. Bagnara, J.T. (2003). "Enigmas of Pterorhodin, a Red Melanosomal Pigment of Tree Frogs". Pigment Cell Research. 16 (5): 510–516. doi:10.1034/j.1600-0749.2003.00075.x.
  12. ಸ್ಕ್ವಾಲ್ಮ್ PA ಮತ್ತು ಇತರರು ಇನ್ಫ್ರಾರೆಡ್‌ ರಿಫ್ಲೆಕ್ಟೆನ್ಸ್ ಇನ್ ಲೀಫ್-ಸಿಟ್ಟಿಂಗ್ ನಿಯೊಟ್ರೋಪಿಕಲ್ ಫ್ರಾಗ್ಸ್. ಸೈನ್ಸ್‌ . 1977; 196:1225–7. PMID 860137
  13. ಬಗ್ನಾರ JT ಮತ್ತು ಇತರರು. ದಿ ಡರ್ಮಲ್ ಕ್ರೊಮಟೊಫೋರ್ ಯುನಿಟ್ J ಸೆಲ್ ಬಯಾಲ್ . 1968; 38:67–79. PMID 5691979 Full text PDF.
  14. ಪಾಲಜ್ಜೊ RE ಮತ್ತು ಇತರರು . ರಿಎರೇಂಜ್ಮೆಂಟ್ಸ್ ಆಫ್ ಟೆರಿನೊಸೋಮ್ಸ್ ಆಂಡ್ ಸೈಟೊಸ್ಕೆಲಿಟನ್ ಎಕಂಪನಿಂಗ್ ಪಿಗ್ಮೆಂಟ್ ಡಿಸ್ಪರ್ಶನ್ ಇನ್ ಗೋಲ್ಡ್‌ಫಿಶ್ ಕ್ಸಾಂತೊಫೋರ್ಸ್. ಸೆಲ್ ಮೋಟಿಲ್ ಸೈಟೊಸ್ಕೆಲಿಟನ್ . 1989; 13:9–20. PMID 2543509
  15. ಪೊರ್ರಾಸ್ MG ಮತ್ತು ಇತರರು . ಕೊರಜೊನಿನ್ ಪ್ರೊಮೋಟ್ಸ್ ಟೆಗ್ಯುಮೆಂಟರಿ ಪಿಗ್ಮೆಂಟ್ ಮೈಗ್ರೇಶನ್ ಇನ್ ದಿ ಕ್ರೇಫಿಶ್ ಪ್ರೊಕಾಂಬರಸ್ ಕ್ಲಾರ್ಕಿ . ಪೆಪ್ಟೈಡ್ಸ್ . 2003; 24:1581–9. PMID 14706537
  16. ಡಿಯಾಕನ್ SW ಮತ್ತು ಇತರರು. ಡೈನಕ್ಟಿನ್ ಈಸ್ ರಿಕ್ವೈರ್ಡ್ ಫಾರ್ ಬೈಡೈರೆಕ್ಶನಲ್ ಆರ್ಗನೆಲ್ಲೆ ಟ್ರಾನ್ಸ್‌ಪೋರ್ಟ್. J ಸೆಲ್ ಬಯಾಲ್ . 2003; 160:297-301. PMID 12551954 ಫುಲ್ ಟೆಕ್ಸ್ಟ್
  17. ಆಸ್ಪೆಂಗ್ರೆನ್ S ಮತ್ತು ಇತರರು. ನಾರ್‌ಅಡ್ರೆನಲಿನ್ ಆಂಡ್ ಮೆಲಟೊನಿನ್-ಮೀಡಿಯೇಟೆಡ್ ರೆಗ್ಯುಲೇಶನ್ ಆಫ್ ಪಿಗ್ಮೆಂಟ್ ಅಗ್ರಿಗೇಶನ್ ಇನ್ ಫಿಶ್ ಮೆಲನೊಫೋರ್ಸ್. ಪಿಗ್ಮೆಂಟ್ ಸೆಲ್ ರೆಸ್ . 2003; 16:59–64. PMID 12519126
  18. ೧೮.೦ ೧೮.೧ ಲೊಗಾನ್ DW ಮತ್ತು ಇತರರು. ರೆಗ್ಯುಲೇಶನ್ ಆಫ್ ಪಿಗ್ಮೆಂಟೇಶನ್ ಇನ್ ಜೀಬ್ರಾಫಿಶ್ ಮೆಲನೊಫೋರ್ಸ್. ಪಿಗ್ಮೆಂಟ್ ಸೆಲ್ ರೆಸ್ . 2006; 19:206-13. PMID 16704454
  19. ೧೯.೦ ೧೯.೧ ಲೋಗನ್ DW ಮತ್ತು ಇತರರು. ದಿ ಸ್ಟ್ರಕ್ಚರ್ ಆಂಡ್ ಎವಲ್ಯೂಶನ್ ಆಫ್ ದಿ ಮೆಲನೊಕೋರ್ಟಿನ್ ಆಂಡ್ MCH ರಿಸೆಪ್ಟರ್ಸ್ ಇನ್ ಫಿಶ್ ಆಂಡ್ ಮ್ಯಾಮಲ್ಸ್. ಜಿನೋಮಿಕ್ಸ್‌ . 2003; 81:184-91. PMID 12620396 ಉಲ್ಲೇಖ ದೋಷ: Invalid <ref> tag; name "MCR2" defined multiple times with different content
  20. ಲೋಗನ್ DW ಮತ್ತು ಇತರರು. ಸೀಕ್ವೆನ್ಸ್ ಕ್ಯಾರಕ್ಟರೈಸೇಶನ್ ಆಫ್ ಟೆಲಿಯೋಸ್ಟ್ ಫಿಶ್ ಮೆಲನೊಕೋರ್ಟಿನ್ ರಿಸೆಪ್ಟರ್ಸ್. ಆನ್ N Y ಅಕಾಡ್ ಸ್ಕೈ . 2003; 994:319-30. PMID 12851332
  21. ಸುಗ್ಡನ್ D ಮತ್ತು ಇತರರು. ಮೆಲಟೊನಿನ್, ಮೆಲಟೊನಿನ್ ರಿಸೆಪ್ಟರ್ಸ್ ಆಂಡ್ ಮೆಲನೊಫೋರ್ಸ್: ಎ ಮೂವಿಂಗ್ ಸ್ಟೋರಿ. ಪಿಗ್ಮೆಂಟ್ ಸೆಲ್ ರೆಸ್ . 2004; 17:454-60. PMID 15357831
  22. ವಾಲ್ವರ್ಡೆ P ಮತ್ತು ಇತರರು ವೇರಿಯಂಟ್ಸ್ ಆಫ್ ದಿ ಮೆಲನೊಸೈಟ್-ಸ್ಟಿಮ್ಯುಲೇಟಿಂಗ್ ಹಾರ್ಮೋನ್ ರಿಸೆಪ್ಟರ್ಸ್ ಜೀನ್ ಆರ್ ಅಸೋಸಿಯೇಟೆಡ್ ವಿದ್ ರೆಡ್ ಹೇರ್ ಆಂಡ್ ಫೇರ್ ಸ್ಕಿನ್ ಇನ್ ಹ್ಯೂಮನ್ಸ್. ನ್ಯಾಟ್ ಗೆನೆಟ್ . 1995; 11:328-30. PMID 7581459
  23. ರಿಚಾರ್ಡ್ಸನ್ J ಮತ್ತು ಇತರರು. mc1r ಪಾತ್‌ವೇ ರೆಗ್ಯುಲೇಶನ್ ಆಫ್ ಜೀಬ್ರಾಫಿಶ್ ಮೆಲನೊಸಮ್ ಡಿಸ್ಪರ್ಶನ್. ಜೀಬ್ರಾಫಿಶ್ . 2008; 5:289-95. PMID 19133827
  24. ಸ್ನಿಡರ್ J ಮತ್ತು ಇತರರು . ಇಂಟ್ರಾಸೆಲ್ಯೂಲರ್ ಆಕ್ಟಿನ್-ಬೇಸ್ಡ್ ಟ್ರಾನ್ಸ್‌ಪೋರ್ಟ್: ಹೌ ಫಾರ್ ಯು ಗೊ ಡಿಪೆಂಡ್ಸ್ ಆನ್ ಹೌ ಆಫನ್ ಯು ಸ್ವಿಚ್. ಪ್ರೋಕ್ ನ್ಯಾಟ್ಲ್ ಅಕಾಡ್ ಸ್ಕೈ USA 103(46):17337–42. PMID 15331778 ಫುಲ್ ಟೆಕ್ಸ್ಟ್ Archived 2008-06-10 ವೇಬ್ಯಾಕ್ ಮೆಷಿನ್ ನಲ್ಲಿ.
  25. ರೋಡಿಯೊನೊವ್ VI ಮತ್ತು ಇತರರು. ಫಂಕ್ಷನಲ್ ಕೊಆರ್ಡಿನೇಶನ್ ಆಫ್ ಮೈಕ್ರೊಟ್ಯುಬ್ಯೂಲ್-ಬೇಸ್ಡ್ ಆಂಡ್ ಆಕ್ಟಿನ್-ಬೇಸ್ಡ್ ಮೋಟಿಲಿಟಿ ಇನ್ ಮೆಲನೊಫೋರ್ಸ್. ಕರ್ ಬಯಾಲ್ . 1998; 8:165-8. PMID 9443917 ಫುಲ್ ಟೆಕ್ಸ್ಟ್ Archived 2008-10-23 ವೇಬ್ಯಾಕ್ ಮೆಷಿನ್ ನಲ್ಲಿ.
  26. ರೋಡಿಯೊನೊವ್ VI ಮತ್ತು ಇತರರು . ಪ್ರೋಟೀನ್ ಕಿನೇಸ್ A, ವಿಚ್ ರೆಗ್ಯುಲೇಟ್ಸ್ ಇಂಟ್ರಾಸೆಲ್ಯುಲಾರ್ ಟ್ರಾನ್ಸ್‌ಪೋರ್ಟ್, ಫಾರ್ಮ್ಸ್ ಕಾಂಪ್ಲೆಕ್ಸಸ್ ವಿದ್ ಮಾಲಿಕ್ಯುಲಾರ್ ಮೋಟಾರ್ಸ್ ಆನ್ ಆರ್ಗನೆಲ್ಲೆಸ್. ಕರ್ ಬಯಾಲ್ . 2002; 14:1877–81. PMID 15498498 ಫುಲ್ ಟೆಕ್ಸ್ಟ್ Archived 2008-10-23 ವೇಬ್ಯಾಕ್ ಮೆಷಿನ್ ನಲ್ಲಿ.
  27. ೨೭.೦ ೨೭.೧ ನ್ಯೂಹಾಸ್ SC. ಬಿಹೇವಿಯರಲ್ ಜೆನೆಟಿಕ್ ಅಪ್ರೋಚಸ್ ಟು ವಿಸ್ವಲ್ ಸಿಸ್ಟಮ್ ಡೆವಲಪ್ಮೆಂಟ್ ಆಂಡ್ ಫಂಕ್ಷನ್ ಇನ್ ಜೀಬ್ರಾಫಿಶ್. J ನ್ಯೂರೊಬಯಾಲ್ . 2003; 54:148-60. PMID 12486702. Full text PDF.
  28. ಕೆಲ್ಶ್ RN ಮತ್ತು ಇತರರು . ಜೆನೆಟಿಕ್ ಅನಾಲಿಸಿಸ್ ಆಫ್ ಮೆಲನೊಫೋರ್ ಡೆವಲಪ್ಮೆಂಟ್ ಇನ್ ಜೀಬ್ರಾಫಿಶ್ ಎಂಬ್ರಾಯ್ಸ್.] ಡೆವ್ ಬಯಾಲ್ . 2000; 225:277-93. PMID 10985850
  29. ಕೆಲ್ಶ್ RN. ಜೆನೆಟಿಕ್ಸ್ ಆಂಡ್ ಎವಲ್ಯೂಶನ್ ಆಫ್ ಪಿಗ್ಮೆಂಟ್ ಪ್ಯಾಟರ್ನ್ಸ್ ಇನ್ ಫಿಶ್. ಪಿಗ್ಮೆಂಟ್ ಸೆಲ್ ರೆಸ್ . 2004; 17:326-36. PMID 15250934
  30. ಲ್ಯಾಮಸನ್ RL ಮತ್ತು ಇತರರು. SLC24A5, ಎ ಪ್ಯುಟೇಟಿವ್ ಕೇಶನ್ ಎಕ್ಸ್‌ಚೇಂಜರ್, ಅಫೆಕ್ಟ್ಸ್ ಪಿಗ್ಮೆಂಟೇಶನ್ ಇನ್ ಜೀಬ್ರಾಫಿಶ್ ಆಂಡ್ ಹ್ಯೂಮನ್ಸ್. ಸೈನ್ಸ್‌ . 2005; 310:1782–6. PMID 16357253
  31. ಜಯವಿಕ್ರೆಮಿ CK ಮತ್ತು ಇತರರು ಯೂಸ್ ಆಫ್ ಎ ಸೆಲ್-ಬೇಸ್ಡ್, ಲಾನ್ ಫಾರ್ಮ್ಯಾಟ್ ಎಸ್ಯೇ ಟು ರಾಪಿಡ್ಲಿ ಸ್ಕ್ರೀನ್ ಎ 442,368 ಬೀಡ್-ಬೇಸ್ಡ್ ಪೆಪ್ಟೈಡ್ ಲೈಬ್ರರಿ. J ಫಾರ್ಮಕೋಲ್ ಟಾಕ್ಸಿಕಾಲ್ ಮೆಥಡ್ಸ್ . 1999; 42:189-97. PMID 11033434
  32. ಆಂಡರ್ಸನ್ TP ಮತ್ತು ಇತರರು. ಫ್ರಾಗ್ ಮೆಲನೊಫೋರ್ಸ್ ಕಲ್ಚರ್ಡ್ ಆನ್ ಫ್ಲೋರೊಸೆಂಟ್ ಮೈಕ್ರೊಬೀಡ್ಸ್: ಬಯೋಮಿಮಿಕ್-ಬೇಸ್ಡ್ ಬಯೊಸೆನ್ಸಿಂಗ್. ಬಯೋಸೆನ್ಸ್ ಬಯೋಎಲೆಕ್ಟ್ರಾನ್ . 2005; 21:111-20. PMID 15967358
  33. ಕಾರ್ಲ್‌ಸನ್ JO ಮತ್ತು ಇತರರು. ದಿ ಮೆಲನೊಫೋರ್ ಅಗ್ರಿಗೇಟಿಂಗ್ ರೆಸ್ಪಾನ್ಸ್ ಆಫ್ ಐಸೊಲೇಟೆಡ್ ಫಿಶ್ ಸ್ಕೇಲ್ಸ್: ಎ ವೆರಿ ರಾಪಿಡ್ ಆಂಡ್ ಸೆನ್ಸಿಟಿವ್ ಡಯಾಗ್ನೋಸಿಸ್ ಆಫ್ ಹೂಪಿಂಗ್ ಕಾಫ್. FEMS ಮೈಕ್ರೊಬಯಾಲ್ ಲೆಟ್ . 1991; 66:169-75. PMID 1936946
  34. ಲೀ I. ನ್ಯಾನೊಟ್ಯೂಬ್ಸ್ ಫಾರ್ ನೋಯ್ಸಿ ಸಿಗ್ನಲ್ ಪ್ರಾಸೆಸಿಂಗ್: ಅಡಾಪ್ಟಿವ್ ಕ್ಯಾಮೌಫ್ಲೇಜ್ ಪಿಎಚ್‌ಡಿ ಥೀಸೀಸ್ . 2005; ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾ. Retrieved June 2006 PDF (799 KiB).
  35. ಕ್ಲೋನಿ RA. ಆಂಡ್ ಫ್ಲೋರಿ E. ಅಲ್ಟ್ರಾಸ್ಟ್ರಕ್ಚರ್ ಆಫ್ ಸೆಫಲೊಪಾಡ್ ಕ್ರೊಮ್ಯಾಟೊಫೋರ್ ಆರ್ಗನ್ಸ್. Z ಜೆಲ್‌ಫೋರ್ಸ್ಚ್ ಮೈಕ್ರೋಸ್ಕ್ ಅನಾಟ್ . 1968; 89:250–280. PMID 5700268
  36. ದೆಂಸ್ಕಿ LS. ಕ್ರೊಮಟೊಫೋರ್ ಸಿಸ್ಟಮ್ಸ್ ಇನ್ ಟೆಲಿಯೋಸ್ಟ್ಸ್ ಆಂಡ್ ಸೆಫಲೊಪಾಡ್ಸ್: ಎ ಲೆವೆಲ್ಸ್ ಓರಿಯೆಂಟೆಡ್ ಅನಾಲಿಸಿಸ್ ಆಫ್ ಕನ್ವರ್ಜೆಂಟ್ ಸಿಸ್ಟಮ್ಸ್. ಬ್ರಿಯಾನ್ ಬಿಹೇವ್ ಎವೋಲ್ . 1992; 40:141-56. PMID 1422807
  37. ಸಾಲ್ಟನ್ MR. ಬ್ಯಾಕ್ಟೀರಿಯಲ್ ಮೆಂಬ್ರೇನ್ ಪ್ರೋಟೀನ್ಸ್. ಮೈಕ್ರೊಬಯಾಲ್ ಸ್ಕೈ . 1987; 4:100-5. PMID 3153178
  38. ಫ್ರಿಗ್ಗಾರ್ಡ್ NU. ಆಂಡ್ ಬ್ರಿಯಾಂಟ್ DA. ಸೀಯಿಂಗ್ ಗ್ರೀನ್ ಬ್ಯಾಕ್ಟೀರಿಯಾ ಇನ್ ಎ ನ್ಯೂ ಲೈಟ್: ಜೀನೋಮಿಕ್ಸ್-ಎನೇಬಲ್ಡ್ ಸ್ಟಡೀಸ್ ಆಫ್ ದಿ ಫೋಟೋಸಿಂಥೆಟಿಕ್ ಅಪ್ಪರೇಟಸ್ ಇನ್ ಗ್ರೀನ್ ಸಲ್ಫರ್ ಬ್ಯಾಕ್ಟೀರಿಯಾ ಆಂಡ್ ಫಿಲಮೆಂಟಸ್ ಆನ್ಆಕ್ಸಿಜೆನಿಕ್ ಫೋಟೊಟ್ರೋಪಿಕ್ ಬ್ಯಾಕ್ಟೀರಿಯಾ. ಆರ್ಕ್ ಮೈಕ್ರೊಬಯಾಲ್ . 2004; 182:265-75. PMID 15340781

ಬಾಹ್ಯ ಕೊಂಡಿಗಳು

[ಬದಲಾಯಿಸಿ]